ಬದಿಯಡ್ಕ: ಬದಿಯಡ್ಕ ಸಮೀಪದ ಉಕ್ಕಿನಡ್ಕ ಮಸೀದಿ ನಿವಾಸಿ, ಮಾಜಿ ಅನಿವಾಸಿ ಭಾರತೀಯ ಹಾಗೂ ಕೃಷಿಕರಾದ ಸರ್ವೆ ಸಾಧಿಕ್ (55) ಅವರು ಮಂಗಳವಾರ ತಡರಾತ್ರಿ ಹೃದಯಾಘಾತದಿಂದ ನಿಧನರಾದರು.
ಕಳೆದ ಭಾನುವಾರವಷ್ಟೇ ಸಾಧಿಕ್ ಅವರ ಪುತ್ರಿ, ದಂತವೈದ್ಯೆ ಡಾ. ಶರಫುನ್ನಿಸಾ ಮತ್ತು ಪನ್ನಿಪ್ಪಾರ ನಿವಾಸಿ ಡಾ. ನಭಾನ್ ಅವರ ವಿವಾಹ ಬಹಳ ಸಂಭ್ರಮದಿಂದ ನಡೆದಿತ್ತು. ಮದುವೆಯ ಕಾರ್ಯಕ್ರಮಗಳು ಮುಗಿದು ಕೇವಲ ಮೂರು ದಿನಗಳಾಗುವಷ್ಟರಲ್ಲಿ ಈ ದುರಂತ ಸಂಭವಿಸಿದೆ. ಮಂಗಳವಾರ ರಾತ್ರಿ ಸುಮಾರು 12 ಗಂಟೆಯ ವೇಳೆಗೆ ಸಾಧಿಕ್ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತರು ಪತ್ನಿ ಸಫಿಯಾ.
ಮಕ್ಕಳಾದ ಡಾ. ಶರಫುನ್ನಿಸಾ, ಸಾಜಿದಾ, ಸಿಬಿಲಿಯತ್ ಮತ್ತು ಮುಸ್ತಫಾ.ಸಹೋದರ ಸಹೋದರಿಯರಾದ ಮುಹಮ್ಮದ್ ಹಾಜಿ (ಬಾಪ್ಪಾಲಿಪೊನಂ ಮಹಲ್ ಅಧ್ಯಕ್ಷರು), ಅಬ್ದುಲ್ಲಾ, ಅಬ್ದುಲ್ ರಹಮಾನ್, ಕುಞಾಹಮ್ಮದ್, ಹಸೈನಾರ್, ಅಶ್ರಫ್, ಬೀಫಾತಿಮಾ, ರಾಬಿಯಾ, ಅಬ್ದುಲ್ ಅಜೀಜ್ ಮತ್ತು ಅಬ್ದುಲ್ ಹಮೀದ್ ಎಂಬಿವರನ್ನು ಅಗಲಿದ್ದಾರೆ.
