ಕಾಸರಗೋಡು: ರಾಷ್ಟ್ರೀಯ ಹೆದ್ದಾರಿಯ ಮಾವುಂಗಾಲ್, ಕಲ್ಯಾಣ್ ರೋಡ್ ಕ್ರೈಸ್ಟ್ ಸ್ಕೂಲ್ ಬಳಿ ಸ್ಕೂಟಿಗೆ ಇನ್ನೋವಾ ಕಾರು ಡಿಕ್ಕಿ ಹೊಡೆದು ಉಂಟಾದ ಅಪಘಾತದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಅವರ ಪುತ್ರನಿಗೆ ಗಂಭೀರ ಗಾಯಗಳಾಗಿವೆ. ಮಾವುಂಗಾಲ್, ನೆಲ್ಲಿಕ್ಕಾಟ್, ಪೈರಡ್ಕದ ವೇಣುಗೋಪಾಲನ್ ಅವರ ಪತ್ನಿ ಕೆ. ರಜನಿ (38) ಮೃತಪಟ್ಟ ಮಹಿಳೆ. ಜೊತೆಯಲ್ಲಿದ್ದ ಮಗ ಅದ್ವೈತ್ (11) ಗಂಭೀರ ಸ್ಥಿತಿಯಲ್ಲಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇಂದು (ಸೋಮವಾರ) ಸಂಜೆ 6.30 ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಅಪಘಾತದ ಬಳಿಕ ನಿಲ್ಲಿಸದೆ ಹೋದ ಇನ್ನೋವಾ ಕಾರನ್ನು ರಾತ್ರಿ 8 ಗಂಟೆಯ ವೇಳೆಗೆ ಹೊಸದುರ್ಗ ಪೊಲೀಸರು ಪತ್ತೆಹಚ್ಚಿದ್ದಾರೆ.
Tags
ಕಾಞಂಗಾಡ್
