5612 ಗ್ರಾಂ ಮೆಥಾಪಿಟಮಿನ್ ಸಹಿತ ಕರ್ಮಂತೋಡಿ ನಿವಾಸಿಯ ಸೆರೆ


 ಬದಿಯಡ್ಕ: ಮೆಥಾಫಿಟಮಿನ್ ಸಹಿತ ಓರ್ವ ಯುವಕನನ್ನು ಎಕ್ಸ್ಪ್ರೆಸ್ ಅಧಿಕಾರಿಗಳು ಬಂಧಿಸಿದ್ದಾರೆ. ಕರ್ಮಂತೋಡಿ ನಿವಾಸಿ ಮುಸಾಲ್ ಹಕೀಂ(28) ಬಂಧಿತ ಆರೋಪಿ. ಈತನ ಕೈಯಿಂದ 5612 ಗ್ರಾಂ ಮೆಥಾಫಿಟಮಿನ್ ವಶಪಡಿಸಲಾಗಿದೆ. ಬದಿಯಡ್ಕ ಎಕ್ಸ್ಪ್ರೆಸ್ ರೇಂಜ್ ಇನ್ಸ್ಪೆಕ್ಟರ್ ಪಿ.ಆರ್.ಜಿಷ್ಣು ಹಾಗೂ ತಂಡ ಕರ್ಮಂತೋಡಿಯಲ್ಲಿ ನಡೆಸಿದ ಕಾರ್ಗಾಚರಣೆಯಲ್ಲಿ ಆರೋಪಿಯನ್ನು ಬಂಧಿಸಲಾಯಿತು. ಇತರ ಅಧಿಕಾರಿಗಳಾದ ಎಂ.ಎ.ಪ್ರಭಾಕರನ್, ಪಿ.ಸದಾನಂದನ್, ಎನ್.ಜನಾರ್ಧನ, ಆರ್.ಲಿಜಿಲ್, ಟಿ.ಧನ್ಯ, ಚಾಲಕ ಎಸ್.ಜಿ.ಸಾಗರ್ ಮೊದಲಾದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು