ಸೀತಾಂಗೋಳಿಯಲ್ಲಿ ಹಾಡುಹಗಲೇ ಯುವಕನನ್ನು ಕೊಲೆಗೈದ ಪ್ರಕರಣ; ಓರ್ವನ ಬಂಧನ


 ಕುಂಬಳೆ: ಸೀತಾಂಗೋಳಿಯಲ್ಲಿ ಹಾಡುಹಗಲೇ ಯುವಕನನ್ನು ಕೊಲೆಗೈದ ಪ್ರಕರಣದಲ್ಲಿ ಓರ್ವನನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ನಾಯ್ಕಾಪು ಬಳಿಯ ಕೋಟೆಕಾರು ನಿವಾಸಿ ಶ್ರೀನಿವಾಸ (38) ಬಂಧಿತ ಆರೋಪಿ.‌ಕುಂಬಳೆ ಇನ್ಸ್ಪೆಕ್ಟರ್ ಬಿಜು ಕೆ.ಜೋಸ್, ಎಸ್.ಐ.ಗಳಾದ ಸನತ್, ಅನಂತಕೃಷ್ಣ ಮೊದಲಾದವರ ನೇತೃತ್ವದಲ್ಲಿ ಆರೋಪಿಯ ಬಂಧನ‌ ನಡೆದಿದೆ.‌ಮದ್ಯದ ಅಮಲಿನಲ್ಲಿ ಕೊಲೆ ನಡೆಸಲಾಗಿದೆ ಎಂದು ಆರೋಪಿ ತಪ್ಪೊಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಪ್ರಕರಣದಲ್ಲಿ ಇನ್ನಷ್ಟು ಆರೋಪಿಗಳಿದ್ದಾರೆಯೇ ಎಂಬುದು ಮುಂದಿನ ತನಿಖೆಯಲ್ಲಿ ತಿಳಿಯಬೇಕಾಗಿದೆ.

    ‌‌‌‌‌    ನಿನ್ನೆ (ಮಂಗಳವಾರ) ಮದ್ಯಾಹ್ನ 3 ಗಂಟೆಯ ವೇಳೆ ಕನ್ನೆಪ್ಪಾಡಿ ಬಳಿಯ ಬಾಪಾಲಿಪನ ನಿವಾಸಿ ಸಫಾಯಿದ್ ಯಾನೆ ಶಫಾಯತ್(35) ನ ಮೃತದೇಹ ಸೀತಾಂಗೋಳಿಯ ಕಟ್ಟಡವೊಂದರ ಹಿಂಭಾಗದಲ್ಲಿ ಪತ್ತೆಯಾಗಿತ್ತು. ಸ್ಥಳೀಯರು ನೀಡಿದ ಮಾಹಿತಿಯಂತೆ ಆಗಮಿಸಿದ್ದ ಕುಂಬಳೆ ಪೊಲೀಸರು ತನಿಖೆ ಆರಂಭಿಸಿದ್ದರು.‌ಮೃತದೇಹದ ಬಳಿ ರಕ್ತಸಿಕ್ತ ಮರದ ತುಂಡು ಲಭಿಸಿತ್ತು.‌ನಿನ್ನೆ ಬೆಳಗ್ಗೆ ಆರೋಪಿ ಶ್ರೀನಿವಾಸ ಹಾಗೂ ಮೃತ ಪರಸ್ಪರ ಜಗಳವಾಡಿದ್ದರು.

ಮೃತದೇಹದ ಪೋಸ್ಟ್ ಮಾರ್ಟಂ ಇಂದು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ನಡೆಯಲಿದೆ. ಮೃತನು ಪತ್ನಿ ತಬಸಿರ, ಮಕ್ಕಳಾದ ಸಿನಾನ್, ತಮೀಸ್, ಶಾಸಿಂ, ದುವ ಮೆಹಾಖ್, ಸಹೋದರ ಸಹೋದರಿಯರಾದ ಮುಸ್ತಫ, ಕಲಂದರ್, ಲತೀಪೊ್, ಸಹದ್, ಸಲಾಂ, ಉಬೈದುಳ್ಳ, ತಾಹಿರ,ಫೌಸಿಯ, ಸಮೀರ ಎಂಬಿವರನ್ನು ಅಗಲಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು