ಅಣ್ಣನ ನಿಧನದ ಬೆನ್ನೆಗೆ ತಮ್ಮನೂ ನಿಧನ


ಕಾಞಂಗಾಡ್: ಅಣ್ಣನ ನಿಧನದ ಬೆನ್ನಿಗೆಯೇ ತಮ್ಮನೂ ನಿಧನರಾದ ಘಟನೆ ನಡೆದಿದೆ. ಅಸೌಖ್ಯದಿಂದಾಗಿ ಚಿಕಿತ್ಸೆ ಪಡೆಯುತ್ತಿದ್ದ ಕರಿಂದಳಂ‌ ಕೋಯಿತಟ್ಟ ಕರಿಂಬಿನ್ ನಿವಾಸಿ ಉಣ್ಣಿಕೃಷ್ಣನ್(45) ನಿಧನರಾದರು. ಇವರ ಅಣ್ಣ ಕರಿಂಬಿನ್ ಸತೀಷನ್ ಎರಡು ವಾರಗಳ ಹಿಂದೆ ನಿಧನರಾಗಿದ್ದರು. ಎರಡು ವಾರಗಳ ಅಂತರದಲ್ಲಿ ಉಂಟಾದ ಇಬ್ಬರು ಸಹೋದರರ ನಿಧನ ಶೋಕಸಾಗರ ಸೃಷ್ಟಿಸಿದೆ. ಇವರು ರಾಘವನ್-ಬಾಲಾಮಣಿ ಅಮ್ಮ ದಂಪತಿಯ ಪುತ್ರರಾಗಿದ್ದಾರೆ.  ಮೃತರು ಸಹೋದರ ಸಹೋದರಿಯರಾದ ಸುರೇಶನ್, ಜಯಶ್ರೀ, ವನಜ,ಸುಮತಿ,ರಾಜಲಕ್ಷ್ಮಿ ಎಂಬಿವರನ್ನು ಅಗಲಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು