ಎದೆ‌ನೋವಿನಿಂದಾಗಿ ಆಸ್ಪತ್ರೆಗೆ ಸಾಗುವ ಮಧ್ಯೆ ‌ಯುವಕ ಹೃದಯಾಘಾತದಿಂದ ಮೃತ್ಯು

 


ಸೀತಾಂಗೋಳಿ: ಎದೆ‌ನೋವಿನಿಂದಾಗಿ ಆಸ್ಪತ್ರೆಗೆ ಸಾಗುವ ಮಧ್ಯೆ ‌ಯುವಕ ಹೃದಯಾಘಾತದಿಂದ ‌ಮೃತಪಟ್ಟ ಘಟನೆ ‌ನಡೆದಿದೆ. ಸೀತಾಂಗೋಳಿ ಪೊನ್ನಂಗಳ‌ ನಿವಾಸಿಯಾದ ಕುಮಾರನ್(40) ಮೃತಪಟ್ಟ ವ್ಯಕ್ತಿ. ಇವರು ಟೈಲ್ಸ್ ಕಾರ್ಮಿಕರಾಗಿದ್ದಾರೆ. ಇಂದು (ಬುದವಾರ) ಮುಂಜಾನೆ ಇವರಿಗೆ ಎದೆ ನೋವು ಕಾಣಿಸಿಕೊಂಡಿದ್ದು ಕೂಡಲೇ ಕುಂಬಳೆ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ದಾರಿ ಮಧ್ಯೆ ಅವರು ಕೊನೆಯುಸಿರೆಳೆದರು. ಮೃತರು ತಂದೆ ನಾರಾಯಣ, ತಾಯಿ ಜಾನಕಿ, ಸಹೋದರ ವಿಜಯಕುಮಾರ್, ಸಹೋದರಿ ರತ್ನ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತರು  ಪೊನ್ನಂಗಳ ಬೇರ್ಯ ಶ್ರೀ ಕೃಷ್ಣ ಭಜನಾ ಮಂದಿರದ  ಸಕ್ರಿಯ ಕಾರ್ಯಕರ್ತರಾಗಿದ್ದರು


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು