ಬದಿಯಡ್ಕ: ಗೋವಾದಲ್ಲಿ ನಡೆದ ಅಪಘಾತದಲ್ಲಿ ನೀರ್ಚಾಲು, ಮಲ್ಲಡ್ಕ ನಿವಾಸಿಯಾದ ಎಂ.ಬಿ.ಎ ವಿದ್ಯಾರ್ಥಿ ಮೃತಪಟ್ಟ ಘಟನೆ ನಡೆದಿದೆ.ಮಲ್ಲಡ್ಕ ನಿವಾಸಿ ನಿವೃತ್ತ ಶಿಕ್ಷಕ ವೀರೇಶ್ವರ ಭಟ್ ಅವರ ಪುತ್ರ ಪ್ರಜ್ವಲ್ ಕರ್ಮಲ್ ಕರ್(26) ಮೃತಪಟ್ಟ ವ್ಯಕ್ತಿ. ಇವರು ಗೋವಾದಲ್ಲಿ ಎಂಬಿಎ ವಿದ್ಯಾರ್ಥಿಯಾಗಿದ್ದರು. ಸೋಮವಾರದಂದು ಇವರು ಚಲಾಯಿಸಿದ ಸ್ಕೂಟರ್ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದ್ದು ಗಂಭೀರ ಗಾಯಗೊಂಡಿದ್ದರು. ಸ್ಥಳೀಯರು ಸೇರಿ ಆಸ್ಪತ್ರೆಗೆ ಗಲುಪಿಸಿದರೂ ಪ್ರಾಣ ಉಳಿಸಲಾಗಲಿಲ್ಲ. ಮೃತರು ತಂದೆ, ತಾಯಿ ಅನ್ನಪೂರ್ಣೇಶ್ವರಿ (ಶಿಕ್ಷಕಿ) ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತದೇಹವನ್ನು ಕಾರ್ಕಳ ಕುಟುಂಬ ಮನೆಗೆ ತಂದು ಸಂಸ್ಕರಿಸಲಾಯಿತು.
Tags
ಬದಿಯಡ್ಕ
