ಬದಿಯಡ್ಕ: ಮುಗು ಚೇವ ಎಂಬಲ್ಲಿ ನಡೆದ ಕೋಳಿ ಅಂಕಕ್ಕೆ ದಾಳಿ ನಡೆಸಿದ ಬದಿಯಡ್ಕ ಪೊಲೀಸರು 7 ಕೋಳಿಗಳ ಸಹಿತ 5 ಮಂದಿಯನ್ನು ಬಂಧಿಸಿದ್ದಾರೆ. ಮಂಜೇಶ್ವರ ನಿವಾಸಿ ಯತೀಶ್(36), ಮುಗು ಪರಿಸರದ ಬಾಬು ರೈ(70), ಸುಧಾಕರ ರೈ (48), ನಾರಾಯಣ (42), ಮುಗು ಚೇವ ನಿವಾಸಿ ಗಣೇಶ ರೈ(40) ಬಂಧಿತರು.ನಿನ್ನೆ (ಸೋಮವಾರ) ಸಾಯಂಕಾಲ ಮುಗು ಚೇವ ಬಳಿಕೋಳಿ ಅಂಕ ನಡೆಯುತ್ತಿದೆಯೆಂಬ ಮಾಹಿತಿಯ ಹಿನ್ನೆಲೆಯಲ್ಲಿ ಬದಿಯಡ್ಕ ಎಸ್.ಐ.ಸುಕುಮಾರನ್ ನೇತೃತ್ವದಲ್ಲಿ ದಾಳಿ ನಡೆದಿತ್ತು. ಪೊಲೀಸರನ್ನು ಕಂಡ ಕೂಡಲೇ ಕೆಲವರು ಓಡಿ ಪರಾರಿಯಾದರೆಂದು ತಿಳಿದು ಬಂದಿದೆ
Tags
ಬದಿಯಡ್ಕ
