ಬದಿಯಡ್ಕ: ಬೇಳದಲ್ಲಿ ಅನಧಿಕೃತವಾಗಿ ನಡೆಯುತ್ತಿದ್ದ ಕೋಳಿ ಅಂಕ ಅಡ್ಡೆಗೆ ದಾಳಿ ನಡೆಸಿದ ಬದಿಯಡ್ಕ ಪೊಲೀಸರು 7 ಮಂದಿಯನ್ನು ಬಂಧಿಸಿದ್ದಾರೆ. 7 ಕೋಳಿ, 3400 ರೂ. ವಶಪಡಿಸಲಾಗಿದೆ.ನಿನ್ನೆ (ಸೋಮವಾರ) 2 ಗಂಟೆಯ ವೇಳೆ ದಾಳಿ ನಡೆದಿದೆ. ವಿಷ್ಣುಮೂರ್ತಿ ನಗರದ ಅನಿಲ್ ಕುಮಾರ್(28), ಬೇಳ ನಿವಾಸಿ ಉದಯ ಕುಮಾರ್(40), ಕನ್ನಿಮಜಲಿ ನಿವಾಸಿ ನಾರಾಯಣ(42), ಕುಮಾರ ಮಂಗಲ ಬಳಿಯ ರವಿರಾಜ್(37), ವಿಷ್ಣುಮೂರ್ತಿ ನಗರ ನಿವಾಸಿ ನಾರಾಯಣ ರೈ(42), ಚೌಕಾರು ನಿವಾಸಿ ಅಕ್ಷಯ್(34), ನಿಧೀಶ್(28) ಬಂಧಿತರು.ರಹಸ್ಯ ಮಾಹಿತಿ ಹಿನ್ನೆಲೆಯಲ್ಲಿ ಪೊಲೀಸರ ದಾಳಿ ನಡೆದಿತ್ತು.
Tags
ಬದಿಯಡ್ಕ
