ಕುಂಬಳೆ: ಮೊಗ್ರಾಲು ಕಡವತ್ ನಿವಾಸಿ ಅಬಲ್ ಅಸೀಸ್ (44) ನಿಧನರಾದರು. ಇವರು ಮೊಗ್ರಾಲು ಪೇಟೆಯಲ್ಲಿ ಬೇಕರಿ ನಡೆಸುತ್ತಿದ್ದರು. ನಿನ್ನೆ (ಸೋಮವಾರ) ಬೆಳಗ್ಗೆ ಇವರಿಗೆ ಮಿದುಳು ಸ್ಥಗಿತ ಉಂಟಾಗಿದ್ದು ಕೂಡಲೇ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಾತ್ರಿ 7 ಗಂಟೆಯ ವೇಳೆ ಅವರು ಕೊನೆಯುಸಿರೆಳೆದರು. ಮೃತರು ಪತ್ನಿ ಶಂಷೀನ, ಮಕ್ಕಳಾದ ಸೈನಬ, ಬಾತುಲ್, ಸುಹರ, ಫಾತಿಮ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
Tags
ಕುಂಬಳೆ
