9 ರ ಬಾಲಕಿಗೆ ಕಿರುಕುಳ ನೀಡಿದ 50 ವರ್ಷ ಪ್ರಾಯದ ಆರೋಪಿಯ ಸೆರೆ


 9 ವರ್ಷ ಪ್ರಾಯದ ಬಾಲಕಿಗೆ ಕಿರುಕುಳ‌ ನೀಡಿದ ಪ್ರಕರಣದಲ್ಲಿ 50 ವರ್ಷ ಪ್ರಾಯದ ಆರೋಪಿಯನ್ನು ಬಂಧಿಸಲಾಗಿದೆ. ಕೋಜಿಕ್ಕೋಡ್ ಮುಕ್ಕಂ ತೇಚ್ಚಿಯಾಟ್ ಕಂಡತ್ತಿಲ್ ಬಾಬುರಾಜನ್ ಬಂಧಿತ ಆರೋಪಿ. ಬಾಲಕಿಯ ಸ್ವಭಾವದಲ್ಲಿ ಬದಲಾವಣೆ ಉಂಟಾದ ಹಿನ್ನೆಲೆಯಲ್ಲಿ ಶಾಲೆಯಲ್ಲಿ ‌ಅಧ್ಯಾಪಕರು ಮಕ್ಕಳಿಗಾಗಿ ನಡೆಸಿದ ಕೌನ್ಸಿಲಿಂಗ್ ವೇಳೆ ಕಿರುಕುಳ ಬಹಿರಂಗಗೊಂಡಿತ್ತು. ಬಾಬುರಾಜನ್‌ ಬಾಲಕಿಗೆ ಹಲವು ಬಾರಿ ಕರುಕುಳ ನೀಡಿದ್ದನು. ಬಂಧಿತ ಆರೋಪಿಯನ್ನು ನ್ಯಾಯಾಲಯದಲ್ಲಿ ಹಾಜರಿಪಡಿಸಲಾಗಿದ್ದು ರಿಮಾಂಡ್ ವಿಧಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು