ಮೀಯಪದವು : ಇತಿಹಾಸ ಪ್ರಸಿದ್ಧ ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವನ್ಮಾನದಲಿ ವಾರ್ಷಿಕ ಜಾತ್ರಾಮಹೋತ್ಸವವು ಫೆಬ್ರವರಿ 11ನೇ ಬುಧವಾರ ವಿವಿದ ವೈದಿಕ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಬ್ರಹ್ಮಶ್ರೀ ವರ್ಕಾಡಿ ದಿನೇಶ ಕೃಷ್ಣ ತಂತ್ರಿಗಳ ನೇತೃತ್ವದಲ್ಲಿ, ಜರಗಲಿದೆ.
ಬೆಳಿಗ್ಗೆ ಗಂಟೆ 7ರಿಂದ ಉಪಕಾಲ ಪೂಜೆ ಗಣಹೋಮ್ಮ ನವಕ ಕಲಶಾಭಿಷೇಕ ಏಕಾದಶ ರುದ್ರಾಭಿಷೇಕ, 9.30ರಿಂದ ಶ್ರೀ ಮಹಾಲಿಂಗೇಶ್ವರ ಭಜನಾ ಸಂಘ ಚಿಗುರುಪಾದೆ ತಂಡದ ಉದ್ಘಾಟನೆ ಹಾಗೂ ಭಜನಾ ಕಾರ್ಯಕ್ರಮ ಜರಗಲಿದೆ.
ಪೂರ್ವಾಹ್ನ ಗಂಟೆ 11ರಿಂದ ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಜಗದೀಶ ಶೆಟ್ಟಿ ಎಲೆಯಾಣ ಅವರಿಗೆ ಕ್ಷೇತ್ರದ ವತಿಯಿಂದ ಅಭಿನಂದನಾ ಕಾರ್ಯಕ್ರಮ, ಹಾಗೂ ಕ್ಷೇತ್ರ ಮೇಲ್ವಿಚಾರಕರಾದ ಗಣಪತಿಭಟ್ ಅಮ್ಮೆನಡ್ಡ ಅವರಿಗೆ ಗೌರವಾರ್ಪಣೆ ಜರಗಲಿದೆ. ಸಮಾರಂಭದಲ್ಲಿ ಬ್ರಹ್ಮಶ್ರೀ ದಿನೇಶ ಕೃಷ್ಣ ತಂತ್ರಿಗಳು ವರ್ಕಾಡಿ ಗೌರವ ಉಪಸ್ಥಿತಿ ಇರಲಿದ್ದು, ಶ್ರೀ ಮಹಾಲಿಂಗೇಶ್ವರ ಸೇವಾ ಟ್ರಸ್ಟ್ ನ ಅಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟಿತ್ತೋಡಿ ಅಧ್ಯಕ್ಷತೆ ವಹಿಸಲಿದ್ದಾರೆ, ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ಕರ್ನಾಟಕ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಭಾಗವಹಿಸಲಿದ್ದಾರೆ, ಕ್ಷೇತ್ರ ಆಡಳಿತ ಮೊಕ್ರೇಸರ ವಸಂತ ಭಟ್ ತೊಟ್ಟಿತ್ತೋಡಿ ಶ್ರೀ ಮಹಾಲಿಂಗೇಶ್ವರ ಸೇವಾ ಸಮಿತಿ ಆಧ್ಯಕ್ಷ ಸತೀಶ್ಚಂದ್ರ ರೈ ಉಪಸ್ಥಿತರಿರುವರು,
Tags
ಉಪ್ಪಳ
