ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದ ಯುವಕ ಆಸ್ಪತ್ರೆಯಲ್ಲಿ‌ ಮೃತ್ಯು


 ಬದಿಯಡ್ಕ: ಗಲ್ಫ್ ಉದ್ಯೋಗಿ ಹಾಗೂ ಪಳ್ಳತ್ತಡ್ಕ ನಿವಾಸಿ ಮುಹಮ್ಮದ್ ಕುಞ ಅವರ ಪುತ್ರ ರಿಶಾದ್(21)  ನಿಧನರಾದರು. ಅಸೌಖ್ಯದ ಹಿನ್ನೆಲೆಯಲ್ಲಿ ವಾರದ ಹಿಂದೆ ಅವರನ್ನು ಚೆಂಗಳ ಆಸ್ಪತ್ರೆಗೆ ದಾಖಲಿಸಲಾಗಿತ್ತು.  ಇಂದು ಮುಂಜಾನೆ ಅವರು ಕೊನೆಯುಸಿರೆಳೆದರು.

    ಹುಟ್ಟಿನಿಂದಲೇ ಹೃದಯ ಸಂಬಂಧ ಖಾಯಿಲೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರಿಗೆ ಹಲವು ಸಲ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಕಾಸರಗೋಡು, ಮಂಗಳೂರು, ಎರ್ನಾಕುಲಂ ಆಸ್ಪತ್ರೆಗಳಲ್ಲಿ ಅವರಗೆ ಚಿಕಿತ್ಸೆ ನೀಡಲಾಗಿತ್ತು. ಈ ಮಧ್ಯೆ ಅವರಿಗೆ ರೋಗ ಉಲ್ಬಣಗೊಂಡು ಚೆಂಗಳ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಕೊನೆಯುಸಿರೆಳೆದರು. ಮೃತರು ತಂದೆ, ತಾಯಿ ದೈನಾವಿ, ಸಹೋದರಿಯರಾದ ಶಾಹಿನ, ರಿಸ್ವಾನ, ರಿಫಾನ ಎಂಬಿವರನ್ನು ಅಗಲಿದ್ದಾರೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು