ಅಸೌಖ್ಯದಿಂದ ಆಸ್ಪತ್ರೆಯಲ್ಲಿ ದಾಖಲಿಸಲ್ಪಟ್ಟ ಯುವಕ ಮೃತ್ಯು


 ನೀರ್ಚಾಲು: ಅಸೌಖ್ಯದಿಂದಾಗಿ ಚಿಕಿತ್ಸೆ ಪಡೆಯುತ್ತಿದ್ದ ಯುವಕ ಮೃತಪಟ್ಟ ಘಟನೆ ನಡೆದಿದೆ. ಮಾನ್ಯ ಲಕ್ಷಂವೀಡು ಕಾಲನಿಯ ದಿವಂಗತ ಗುರುವ-ಮಾಣಿಕ್ಕ ದಂಪತಿಯ  ಪುತ್ರ ವಿಶ್ವನಾಥ(46) ಮೃತಪಟ್ಟ ಯುವಕ. ಕೆಮ್ಮು ಹಾಗೂ ಉಸಿರಾಟದ ತೊಂದರೆಯ ಹಿನ್ನೆಲೆಯಲ್ಲಿ ಇವರು ಚಿಕಿತ್ಸೆ ಪಡೆಯುತ್ತಿದ್ದರು. ಅಸೌಖ್ಯ  ಉಲ್ಬಣಿಸಿದ ಹಿನ್ನೆಲೆಯಲ್ಲಿ ನಿನ್ನೆ ಮದ್ಯಾಹ್ನ ಅವರನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಾಯಂಕಾಲ ಅವರು ಕೊನೆಯುಸಿರೆಳೆದರು. ಮೃತರು ತಾಯಿ, ಸಹೋದರ ಸಹೋದರಿಯರಾದ ರಾಮಚಂದ್ರ, ಆನಂದ, ಶಂಕರ, ಕಮಲ, ಲೀಲಾವತಿ, ಸಂಜೀವ ಎಂಬಿವರನ್ನು ಅಗಲಿದ್ದಾರೆ. ಬದಿಯಡ್ಕ ಪೊಲೀಸರು ಕೇಸು ದಾಖಲಿಸಿದರು. ಮೃತರು ಸಕ್ರಿಯ ಕಾಂಗ್ರೆಸ್ ಕಾರ್ಯಕರ್ತರಾಗಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು