ಕಲ್ಲಂಗಡಿ ಹೇರಿ ಬಂದ ಪಿಕಪ್ ವ್ಯಾನಿನಿಂದ ಭಾರೀ ಪ್ರಮಾಣದ ಸ್ಪೋಟಕ ವಸ್ತುಗಳನ್ನು ವಶಪಡಿಸಲಾಗಿದೆ. ಪಿಕಪ್ ಚಾಲಕ ತಮಿಳುನಾಡು ಕರ್ಮಪುರಿ ನಿವಾಸಿ ಸೆಂಥಿಲ್ ಕುಮಾರ್ ಎಂಬಾತನನ್ನು ಬಂಧಿಸಲಾಗಿದೆ. ನಿನ್ನೆ ಪಾಲಕ್ಕಾಡ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.
ತಮಿಳುನಾಡಿನಿಂದ ಕೇರಳಕ್ಕೆ ಆಗಮಿಸಿದ.ಪಿಕಪ್ ವ್ಯಾನು ಪೊಲೀಸರು ನಿಲ್ಲಿಸಲು ಕೈ ತೋರಿಸಿದರೂ ಅದು ನಿಲ್ಲಿಸದೆ ಪರಾರಿಯಾಯಿತು. ಇದನ್ನು ಬೆನ್ನಟ್ಟಿ ಹಿಡಿದು ಪರಿಶೋಧಿಸಿದಾಗ 20 ಪೆಟ್ಟಿಗೆ ಸ್ಪೋಟಕವಸ್ತು ಪತ್ತೆಯಾಗಿದೆ.ಪೆಟ್ಟಿಗೆಗಳಲ್ಲಿ ಜಲಾಟಿನ್ ಸ್ಟಿಕ್, ಡಿಟ್ಟನೇಟರು ಎಂಬಿವು ವಶಪಡಿಸಲಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಯುತ್ತಿದೆ.
Tags
ಪಾಲಕ್ಕಾಡ್
