ಕ್ಯಾಂಪ್ಕೋ ಸಂಸ್ಥೆಯ "ಸಾಂತ್ವನ" ಯೋಜನೆ; ಕುಂಡಂಗುಯಿ ಶಾಖೆಯ ಸಕ್ರಿಯ ಸದಸ್ಯರ ಚಿಕಿತ್ಸೆಗೆ ಸಹಾಯಧನ ಹಸ್ತಾಂತರ


 *ಕ್ಯಾಂಪ್ಕೋ ಸಂಸ್ಥೆಯ  "ಸಾಂತ್ವನ" ಯೋಜನೆಯಡಿಯಲ್ಲಿ ಕ್ಯಾಂಪ್ಕೋ ಕುಂಡಕುಯಿ ಶಾಖೆಯ ಸಕ್ರಿಯ ಸದಸ್ಯರಾದ 

 ಕುಂಡಂಕುಳಿಯ ಶ್ರೀ ರಾಧಾಕೃಷ್ಣ ಭಟ್ ಅವರ ವೈದ್ಯಕೀಯ ಚಿಕಿತ್ಸೆಗಾಗಿ 

​₹33,136 ಮೊತ್ತದ ಚೆಕ್ಕನ್ನು ಕ್ಯಾಂಪ್ಕೋ ನಿರ್ದೇಶಕರಾದ ಶ್ರೀ ಗಣೇಶ್ ಪಾರಕಟ್ಟೆ ಹಾಗೂ ಶ್ರೀ ವಿವೇಕಾನಂದ ಗೌಡ ಪಾಲಾರ್ ಅವರು ಕುಂಡಂಕುಳಿಯಲ್ಲಿರುವ ಶ್ರೀ ರಾಧಾಕೃಷ್ಣ ಭಟ್ ಅವರ ಮನೆಗೆ ಭೇಟಿ ನೀಡಿ ಹಸ್ತಾಂತರಿಸಿದರು.

​ಈ ಸಂದರ್ಭದಲ್ಲಿ ಬದಿಯಡ್ಕ ಪ್ರಾದೇಶಿಕ ವ್ಯವಸ್ಥಾಪಕರಾದ ಎಂ. ಚಂದ್ರ ಮತ್ತು ಕಾಸರಗೋಡು ಶಾಖಾ ವ್ಯವಸ್ಥಾಪಕರಾದ ಎ. ವಿನೋದಕುಮಾರ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು