ಬದಿಯಡ್ಕ: ಬದಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ಲಸ್ ಟು ವಿದ್ಯಾರ್ಥಿನಿ ಹಾಗೂ ಗೃಹಿಣಿ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಬೇಳ ಕುಕ್ಕಂಕೂಡ್ಲು ನಿವಾಸಿಯಾದ ಪ್ಲಸ್ ಟು ವಿದ್ಯಾರ್ಥಿನಿ ನಿನ್ನೆ (ಶುಕ್ರವಾರ) ಸ್ಪೆಶಲ್ ಕ್ಲಾಸಿಗೆಂದು ಹೋದವಳು ಹಿಂತಿರುಗಿರಲಿಲ್ಲ. ಈ ಬಗ್ಗೆ ತಾಯಿ ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದಾರೆ.
ಡ್ರೈವಿಂಗ್ ಕಲಿಯಲೆಂದು ಮನೆಯಿಂದ ಹೋದ ಗೃಹಿಣಿ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಬದಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ನೆಲ್ಲಿಕಟ್ಟೆ ಕ್ವಾಟರ್ಸಿನಲ್ಲಿ ವಾಸಿಸುವ 31 ವರ್ಷ ಪ್ರಾಯದ ಯುವತಿ ನಾಪತ್ತೆಯಾಗಿದ್ದು ಪತಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
Tags
ಬದಿಯಡ್ಕ
