ಪೊಡಿಪ್ಪಳ್ಳ ಶ್ರೀ ಚೀರುಂಬಾ ಭಗವತಿ‌ ಕ್ಷೇತ್ರ ನವೀಕರಣ: ಕೂಪನ್ ಬಿಡುಗಡೆ‌ ನಾಳೆ


 ಕುಂಬ್ಡಾಜೆ: ಪೊಡಿಪ್ಪಳ್ಳ ಶ್ರೀ ಚೀರುಂಬಾ ಭಗವತಿ ಕ್ಷೇತ್ರದ‌‌ ನವೀಕರಣದ ಅಂಗವಾಗಿ ಸಿದ್ದಪಡಿಸಿದ ನವೀಕರಣ ನಿಧಿ ಕೂಪನ್ ಬಿಡುಗಡೆ ನಾಳೆ (ಫೆಬ್ರವರಿ 15) ನಡೆಯಲಿದೆ. ನಾಳೆ ಬೆಳಗ್ಗೆ 9.30 ಗಂಟೆಗೆ ಕ್ಷೇತ್ರ ಸಭಾ ಭವನದಲ್ಲಿ ಕಾರ್ಯಕ್ರಮ ನಡೆಯಲಿದೆ. ಕ್ಷೇತ್ರ ಆಚಾರ ಸ್ಥಾನಿಕರಾದ ಅಂಬಾಡಿ ಕಾರ್ನವರ್ ದೀಪ ಬೆಳಗಿಸಲಿರುವರು. ಧಾರ್ಮಿಕ ‌ಮುಂದಾಳು, ಉದ್ಯಮಿ ಗೋಪಾಲಕೃಷ್ಣ ಪೈ ಬದಿಯಡ್ಕ ನವೀಕರಣ ನಿಧಿ ಕೂಪನ್ ಉದ್ಘಾಟಸುವರು.‌ಭರಣ ಸಮಿತಿ ಅಧ್ಯಕ್ಷ ವಸಂತ ಚೇಂಬೋಡು ಅಧ್ಯಕ್ಷತೆ ವಹಿಸುವರು. ಕುಂಬ್ಡಾಜೆ ಗ್ರಾಮ‌ಪಂಚಾಯತು ಅಧ್ಯಕ್ಷೆ  ಶ್ರೀಮತಿ ಯಶೋಧ, ಉಪಾಧ್ಯಕ್ಷ ರವೀಂದ್ರ ರೈ ಗೋಸಾಡ, ಸದಸ್ಯ ಬಿ.ಟಿ.ಅಬ್ದುಲ್ಲ ಕುಣಷ,

 ತೀಯ್ಯ‌ ಮಹಾ‌ ಸಭಾ  ರಾಜ್ಯ ಅಧ್ಯಕ್ಷ ಗಣೇಶ ಅರಮಂಗಾನಂ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ನವೀಕರಣ ಸಮಿತಿ ಅಧ್ಯಕ್ಷ ರಾಘವನ್ ಕನಕತ್ತೋಡಿ, ಪ್ರವಾಸಿ ಸಮಿತಿ ಅಧ್ಯಕ್ಷ ಶಶಿಧರ ಚೇಡಿಕಾನ, ಕ್ಷೇತ್ರ ಟ್ರಸ್ಟ್ ಅಧ್ಯಕ್ಷ ಗಂಗಾಧರ ಪಳ್ಳತ್ತಡ್ಕ, ಮಹಿಳಾ ಸಮಿತಿ ಅಧ್ಯಕ್ಷೆ ನ್ಯಾಯವಾದಿ ಅಕ್ಷತಾ ಇಕ್ಕೇರಿ, ಯುವಜನ ಸಮಿತಿ ಅಧ್ಯಕ್ಷ ಜನಾರ್ದನ ಭಂಡಾರಮನೆ, ರತೀಶ್ ನೆಕ್ರಾಜೆ, ರವಿ ಚೇಂಬೋಡು ಮೊದಲಾದವರು ಉಪಸ್ಥಿತರಿರುವರು. ಟ್ರಸ್ಟ್ ಕಾರ್ಯದರ್ಶಿ ವಿಶ್ವನಾಥ ಬಳ್ಳಪದವು ಕಾರ್ಯಕ್ರಮ ‌ನಿರೂಪಿಸುವರು. ವಿವಿದ ಸಮಿತಿ‌ ಪದಾಧಿಕಾರಿಗಳು, ಭಗವದ್ಭಕ್ತರು‌ ಭಾಗವಹಿಸುವರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು