ಬದಿಯಡ್ಕ: ಕಳೆದ ತ್ರಿಸ್ತರ ಪಂಚಾಯಿತಿ ಚುನಾವಣೆಯಲ್ಲಿ ವಾರ್ಡು ಮಟ್ಟದಲ್ಲಿ ಜಯಗಳಿಸಲಾಗದಿದ್ದರೂ ಜನರ ಆಶೋತ್ತರಗಳಿಗೆ ಸ್ಪಂದಿಸಿದ ಬಿಜೆಪಿ ಕಾರ್ಯಕರ್ತರು ಜನಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಬದಿಯಡ್ಕ ಗ್ರಾಮ ಪಂಚಾಯಿತಿ 5ನೇ ವಾರ್ಡು ಮೂಕಂಪಾರೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುನಿಲ್ ಕಿನ್ನಿಮಾಣಿ ಅವರು ಸಣ್ಣ ಅಂತರದಿಂದ ಯುಡಿಎಫ್ ಅಭ್ಯರ್ಥಿಯ ವಿರುದ್ಧ ಸೋಲನ್ನು ಕಂಡಿದ್ದರು. ಚುನಾವಣಾ ಪ್ರಚಾರದ ವೇಳೆ ಬಾಂಜತ್ತಡ್ಕ ಹಾಗೂ ಇಕ್ಕೇರಿ ಉನ್ನತಿಯಲ್ಲಿ ನೀರಿನ ಸಮಸ್ಯೆಯನ್ನು ಬಗೆಹರಿಸುವ ಭರವಸೆ ನೀಡಿದ್ದರು. ಈ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಜೊತೆಗೂಡಿ ಕೆಟ್ಟುಹೋದ ಮೋಟಾರು ಬದಲಿಸಿ ಹೊಸ ಮೋಟಾರು ಅಳವಡಿಸಿದರು. ಈ ಮೂಲಕ ನೀರಿನ ಬವಣೆಗೆ ಶಾಶ್ವತ ಪರಿಹಾರ ಉಂಟಾಗಿದೆ.
ಪಕ್ಷದ ಪ್ರಮುಖರಾದ ಕುಮಾರ ಇಕ್ಕೇರಿ, ಸುನಿಲ್ ಕಿನ್ನಿಮಾಣಿ ನೇತೃತ್ವವನ್ನು ನೀಡಿದ್ದರು. ಪಕ್ಷದ ಕಾರ್ಯಕರ್ತರು ಸಹಕರಿಸಿದರು.
Tags
ಬದಿಯಡ್ಕ

