ಕುಂಜತ್ತೂರಿನಲ್ಲಿ ಸ್ವಂತ‌‌ ಮಗಳನ್ನೇ‌ ಇರಿದು ಕೊಲೆಗೈದ ತಂದೆ.


 ಮಂಜೇಶ್ವರ: ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಜತ್ತೂರಿನಲ್ಲಿ ಸ್ವಂತ ಪುತ್ರಿಯನ್ನು ತಂದೆ ಇರಿದು ಕೊಲೆಗೈದ ಘಟನೆ ನಡೆದಿದೆ. ಕುಂಜತ್ತೂರು ಹಿಲ್ ಟಾಪ್ ನಿವಾಸಿ ಜುಮೈಲ(18) ಮೃತಪಟ್ಟ ಯುವತಿ. 
ಇಂದು (ಸೋಮವಾರ) ಸಾಯಂಕಾಲ 6 ಗಂಟೆಯ ವೇಳೆ  ಈ ದಾರುಣ ಘಟನೆ ನಡೆದಿದೆ. ಇರಿತದ ಗಾಯಗಳಿಂದ ಗಂಭೀರ ಗಾಯಗೊಂಡ ಜುಮೈಲಳನ್ನು ಆಸ್ಪತ್ರೆಗೆ ತಲುಪಿಸಿದರೂ ಪ್ರಾಣ ಉಳಿಸಲಾಗಲಿಲ್ಲ. ಜುಮೈಲಳ‌ ತಂದೆ  ಉಮ್ಮರ್ ಇದೀಗ ಪೋಲೀಸರ ವಶದಲ್ಲಿದ್ದಾನೆ.  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು