ನೀರ್ಚಾಲು:ಉದ್ಘಾಟನೆಗೊಂಡು ವರ್ಷಗಳೇ ಕಳೆದರೂ ಜನರ ಉಪಯೋಗಕ್ಕೆ ಲಭಿಸದ ನೀರ್ಚಾಲು ರಸ್ತೆ ಬದಿಯಲ್ಲಿರುವ ಶೌಚಾಲಯವನ್ನು ಸಾರ್ವಜನಿಕರಿಗಾಗಿ ತೆರೆಯಲಾಗುವುದು. ಬದಿಯಡ್ಕ ಗ್ರಾಮಪಂಚಾಯತು ಅಧ್ಯಕ್ಷರಾದ ಡಿ. ಶಂಕರ ಅವರು ವೀಕ್ಷಿಸಿ ಈ ಬಗ್ಗೆ ಅಧಿಕಾರಿಗಳಿಗೆ ಆದೇಶನೀಡಿದ್ದಾರೆ. ಶೌಚಾಲಯಕ್ಕೆ ಬೇಕಾದ ಸೌಲಭ್ಯಗಳನ್ನು ಅಳವಡಿಸಿ ಸಾರ್ವಜನಿಕರ ಉಪಯೋಗಕ್ಕೆ ತೆರೆದುಕೊಡುವುದಾಗಿ ಭರವಸೆಯನ್ನು ಅವರು ನೀಡಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ., ಗ್ರಾಮ ಪಂಚಾಯತು ಸದಸ್ಯ ಶ್ಯಾಮಪ್ರಸಾದ ಸರಳಿ ಜೊತೆಗಿದ್ದರು. ವರ್ಷಗಳ ಹಿಂದೆ ಗ್ರಾಮ ಪಂಚಾಯತು ನಿಧಿಯಿಂದ ಸಾರ್ವಜನಿಕರಿಗಾಗಿ ನಿರ್ಮಿಸಿದ್ದ ಶೌಚಾಲಯಕ್ಕೆ ಬೀಗ ಜಡಿಯಲಾಗಿತ್ತು. ಇದರಿಂದಾಗಿ ಶೌಚಾಲಯವು ಸಾರ್ವಜನಿಕರ ಪಾಲಿಗೆ ಕನಸಾಗಿ ಉಳಿದಿತ್ತು. ಬಿಜೆಪಿ ನೇತೃತ್ವದ ಗ್ರಾಮಪಂಚಾಯತು ಆಡಳಿತವು ಇದೀಗ ಶೌಚಾಲಯವನ್ನು ಸಾರ್ವಜನಿಕರಿಗಾಗಿ ತೆರೆಯಲು ನಿರ್ದರಿಸಿದೆ.
ನೀರ್ಚಾಲಿನ ಸಾರ್ವಜನಿಕ ಶೌಚಾಲಯವು ಉದ್ಘಾಟನೆಗೊಂಡು ಪಾಳುಬಿದ್ದಿರುವುದನ್ನು ಗಮನಿಸಿ ಜನೋಪಯೋಗಕ್ಕೆ ತೆರೆದುಕೊಡಲು ಕೂಡಲೇ ಬೇಕಾದ ವ್ಯವಸ್ಥೆಯನ್ನು ಮಾಡುವುದಾಗಿ ಭರವಸೆಯನ್ನು ನೀಡಿದ ಅಧ್ಯಕ್ಷರಿಗೆ ಗ್ರಾಮ ಪಂಚಾಯತು ಸದಸ್ಯ ಶ್ಯಾಮಪ್ರಸಾದ ಸರಳಿ ಕೃತಜ್ಞತೆಯನ್ನು ಅರ್ಪಿಸಿದ್ದಾರೆ.
