ಕಾಸರಗೋಡು: ಎದೆಹಾಲು ಗಂಟಲಲ್ಲಿ ಸಿಲುಕಿ ನಾಲ್ಕು ತಿಂಗಳು ಪ್ರಾಯದ ಗಂಡು ಮಗು ಮೃತಪಟ್ಟ ಘಟನೆ ನಡೆದಿದೆ. ಬೇಕಲ ಹದ್ದಾದ್ ನಹರದ ಕೆ.ಮುಹಮ್ಮದ್ ಹನೀಫರ ಪುತ್ರ ಲಿದಾನ್ ಫಾರ್ಮಿ ಮೃತಪಟ್ಟ ಮಗು. ನಿನ್ನೆ (ಆದಿತ್ಯವಾರ) ರಾತ್ರಿ ಏಳೂವರೆಯಿಂದ 11 ಗಂಟೆಯ ಮಧ್ಯೆ ಈ ಘಟನೆ ನಡೆದಿದೆ. ಎದೆ ಹಾಲು ನೀಡಿ ಮಗುವನ್ನು ಮಲಗಿಸಲಾಗಿತ್ತು. ರಾತ್ರಿ 11 ಗಂಟೆಗೆ ನೋಡಿದಾಗ ಮಗು ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡುಬಂದಿದ್ದು ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಪ್ರಾಣ ಉಳಿಸಲಾಗಲಿಲ್ಲ. ಬೇಕಲ ಪೊಲೀಸರು ಕೇಸು ದಾಖಲಿಸಿದರು.
Tags
ಕಾಸರಗೋಡು
