ಕುಂಬ್ಡಾಜೆ: ಕುಂಬ್ಡಾಜೆ ಗ್ರಾಮ ಪಂಚಾಯತು ಹಾಗೂ ಕುಟುಂಬ ಆರೋಗ್ಯ ಕೇಂದ್ರದ ಆಶ್ರಯದಲ್ಲಿ 6 ಉದ್ದೇಶಗಳನ್ನು ಮುಂದಿಟ್ಟುಕೊಂಡು ವಿಷನ್ 2026 ಕಾರ್ಯಕ್ರಮ ಆರಂಭಿಸಿದೆ. ಗ್ರಾಮ ಪಂಚಾಯತು ವ್ಯಾಪ್ತಿಯ 7 ಶಾಲೆಗಳ ಪರಿಸರಗಳು ತಂಬಾಕು ಉತ್ಪನ್ನಗಳ ಮಾರಾಟ ರಹಿತ ಪ್ರದೇಶವಾಗಿಸಲು, ಪಾಲಿಯೇಟಿವ್ ಪರಿಚರಣೆ ಲಭಿಸುವ ಹಾಗೂ ನಿರ್ಗತಿಕ ರೋಗಿಗಳಿಗೆ ಪರಿರಕ್ಷೆ ಲಭಿಸಲು ಜನರ ಸಹಭಾಗಿತ್ವದ ಸಮಿತಿ ರೂಪೀಕರಿಸಲಾಯಿತು. ಅಲ್ಲದೆ ಮಲೇರಿಯ ನಿರ್ಮೂಲನೆ ಚಡುವಟಿಕೆಗಳಿಗೆ ಎಲ್ಲ ವಾರ್ಡುಗಳಲ್ಲಿ ಸ್ವಯಂಸೇವಕರನ್ನು ಆರಿಸಲು, ಕುಂಬ್ಡಾಜೆ ಗ್ರಾಮ ಪಂಚಾಯತನ್ನು ಕ್ಷಯ ರೋಗ ಮುಕ್ತ ಮಾಡಲು, ಇದಕ್ಕಾಗಿ ಸರ್ವೇ ನಡೆಸಲು ನಿರ್ಧರಿಸಲಾಯಿತು. ಕುಂಬ್ಡಾಜೆ ಗ್ರಾಮ ಪಂಚಾಯತು ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಅಧ್ಯಕ್ಷೆ ಶ್ರೀಮತಿ ಯಶೋಧ ಉದ್ಘಾಟಿಸಿದರು. ಉಪಾಧ್ಯಕ್ಷ ರವೀಂದ್ರ ರೈ ಗೋಸಾಡ ಅಧ್ಯಕ್ಷತೆ ವಹಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಪ್ರಿಯಂಕ ಎ.ಸಿ, ನಯನ ಕನಕಜೆ, ಎಂ.ಅಬೂಬಕರ್, ಸದಸ್ಯರುಗಳಾದ ಮಹೇಶ ಎ, ನೂರುದ್ದೀನ್ ಪಿ, ಸೌಭಾಗ್ಯಲಕ್ಷ್ಮಿ, ಗೀತಾ ಡಿ, ಎಸ್.ಮುಹಮ್ಮದ್ ಕುಞ, ಕೊರಗಪ್ಪ ಜಿ, ಬಬಿತ ರೇಶ್ಮ, ಬಿ.ಟಿ.ಅಬ್ದುಲ್ಲ ಕುಞ, ಡಾ.ಆದಿರ ಮೊದಲಾದವರು ಮಾತನಾಡಿದರು.ಕುಟುಂಬ ಆರೋಗ್ಯ ಕೇಂದ್ರದ ಸಿಬಂದಿಗಳು ಸಹ ಭಾಗವಹಿಸಿದರು. ವಿಷನ್ 2026 ರ ಕುರಿತು ಮೆಡಿಕಲ್ ಆಫೀಸರ್ ಡಾ.ಸಾಯಿದ್ ಹಮೀದ್ ಶುಹೈಬ್,ಆರೋಗ್ಯ ಅಧಿಕಾರಿ ಕೆ.ಸುರೇಶ್ ಕುಮಾರ್ ಮೊದಲಾದವರು ಮಾಹಿತಿ ನೀಡಿದರು. ಆಶಾ ಕಾರ್ಯಕರ್ತೆ ಲಕ್ಷ್ಮಿ ಎನ್.ವಂದಿಸಿದರು
Tags
ಬದಿಯಡ್ಕ
