ಕಾಸರಗೋಡು: ಅಸೌಖ್ಯದಿಂದಾಗಿ ಚಿಕಿತ್ಸೆ ಪಡೆಯುತ್ತಿದ್ದ ವಿದ್ಯಾರ್ಥಿ ಎರ್ನಾಕುಲಂ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನಡೆದಿದೆ. ಚಾತ್ತಂಗೈ ನಿವಾಸಿ ಶ್ರೀಧರನ್ ನಾಯರ್- ಸೌಮ್ಯ ದಂಪತಿಯ ಪುತ್ರ ಅಖಿಲ್ ಮೃತಪಟ್ಟ ಯುವಕ. ಕ್ಯಾನ್ಸರ್ ರೋಗ ಪೀಡಿತನಾದ ಅಖಿಲ್ ಕಳೆದ ಒಂದು ವರ್ಷದಿಂದ ಚಿಕಿತ್ಸೆ ಪಡೆಯುತ್ತಿದ್ದನು. ಮೃತನು ತಂದೆ, ತಾಯಿ, ಸಹೋದರಿ ನಿರೋಶ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾನೆ. ಡಿಗ್ರಿ ವಿದ್ಯಾರ್ಥಿಯಾಗಿದ್ದ ಅಖಿಲ್, ರೋಗ ಪೀಡಿತನಾಗಿದ್ದು ಈ ವೇಳೆ ಸ್ಥಳೀಯರು ಚಿಕಿತ್ಸಾ ಸಮಿತಿ ರಚಿಸಿ ಹಣ ಸಂಗ್ರಹಿಸಿದ್ದರು.
Tags
ಕಾಸರಗೋಡು
