ಕಾಸರಗೋಡು : ಕಾಸರಗೋಡು ಹೊಸ ಬಸ್ ಸ್ಟ್ಯಾಂಡ್‌ನಲ್ಲಿ ನಗರಸಭೆಯ ಸ್ವಾಮ್ಯದ 6/1046.B ಸಂಖ್ಯೆಯ ಕಟ್ಟಡಕ್ಕೆ ಲೈಸೆನ್ಸ್ (ಬಾಡಿಗೆ) ಪಡೆದು, ನಗರಸಭೆಯ ತಿಳುವಳಿಕೆ ಮತ್ತು ಅನುಮತಿಯಿಲ್ಲದೆ ರಿಷಾಲ್ ಕೆ.ಎಂ ಅವರು ಕಟ್ಟಡದ ಮುಂಭಾಗದಲ್ಲಿ ಶೀಟ್ ಬಳಸಿ ನಿರ್ಮಿಸಿದ ಅನಧಿಕೃತ ನಿರ್ಮಾಣವನ್ನು ಕೆಡವುವ ಆದೇಶದ ವಿರುದ್ಧ, ಆ ಕ್ರಮವನ್ನು ಸ್ಥಗಿತಗೊಳಿಸಲು ಶ್ರೀ ರಿಷಾಲ್ ಕೆ.ಎಂ ಅವರು ಮಾನ್ಯ ನಗರಸಭೆ ಅಧ್ಯಕ್ಷರಿಗೆ ಸಲ್ಲಿಸಿದ ಅಪೀಲ್ ಅರ್ಜಿಯನ್ನು ಪರಿಗಣಿಸುವ ಕುರಿತ ವಿಷಯದಲ್ಲಿ ಬಿಜೆಪಿ_ ಲೀಗ್ ಸದಸ್ಯರ ನಡುವೆ ಕಾಸರಗೋಡು ನಗರಸಭೆಯ ಸಾಮಾನ್ಯ ಸಭೆಯಲ್ಲಿ ವಾಗ್ವಾದ ನಡೆಯಿತು.
ಕಾಸರಗೋಡು ನಗರಸಭೆಯ ಸ್ವಾಮ್ಯದ ಕಾಸರಗೋಡು ಹೊಸ ಬಸ್ ಸ್ಟ್ಯಾಂಡ್‌ನ 6/1046.B ಸಂಖ್ಯೆಯ ಕಟ್ಟಡಕ್ಕೆ ಲೈಸೆನ್ಸ್ (ಬಾಡಿಗೆ) ಪಡೆದ ನಂತರ, ನಗರಸಭೆಯ ತಿಳುವಳಿಕೆ ಮತ್ತು ಅನುಮತಿಯಿಲ್ಲದೆ ರಿಷಾಲ್ ಕೆ.ಎಂ ಅವರು ಶೀಟ್ ಬಳಸಿ ಅನಧಿಕೃತ ನಿರ್ಮಾಣ ನಡೆಸಿರುವುದಾಗಿ ಕೇರಳ ಸ್ಟೇಟ್ ಬಸ್ ಆಪರೇಟಿವ್ ಫೆಡರೇಶನ್‌ನ ಕಾರ್ಯದರ್ಶಿ/ಅಧ್ಯಕ್ಷ/ಖಜಾಂಚಿಗಳು ಸೇರಿ ಮಾನ್ಯ ಜಿಲ್ಲಾ ಲೀಗಲ್ ಸರ್ವೀಸ್ ಅಥಾರಿಟಿ ಮುಂದೆ ದೂರು ನೀಡಲಾಗಿದೆ.
ಈ ದೂರು ಆಧಾರದ ಮೇಲೆ, ಕಾಸರಗೋಡು ನಗರಸಭೆ ಕಾರ್ಯದರ್ಶಿಯನ್ನು ಪ್ರತಿವಾದಿಯಾಗಿ ಸೇರಿಸಿ PLP 4005/2025 ಸಂಖ್ಯೆಯ ಪ್ರಕರಣವನ್ನು ದಾಖಲಿಸಲಾಗಿದೆ.
ಅದರಿಂದ, ಕಾಸರಗೋಡು ನಗರಸಭೆ ಕಾರ್ಯದರ್ಶಿಯವರು 20/01/2026 ರಂದು ಶ್ರೀ ರಿಷಾಲ್ ಕೆ.ಎಂ ಅವರಿಗೆ ಸಂಬಂಧಿಸಿದ ಅನಧಿಕೃತ ನಿರ್ಮಾಣ ಕುರಿತು ನೋಟಿಸ್ ನೀಡಿರುವರು.ಅನಧಿಕೃತ ನಿರ್ಮಾಣವನ್ನು 15 ದಿನಗಳೊಳಗೆ ತೆರವುಗೊಳಿಸಿ ಈ ಕಚೇರಿಗೆ ತಿಳಿಸಬೇಕೆಂದು, ಇಲ್ಲವಾದಲ್ಲಿ ಕಾಸರಗೋಡು ನಗರಸಭೆಯಿಂದ ಶ್ರೀ ರಿಷಾಲ್ ಕೆ.ಎಂ ಅವರಿಗೆ ನೀಡಿದ ಲೈಸೆನ್ಸ್ (ಬಾಡಿಗೆ) ರದ್ದುಪಡಿಸಿ, ಸಂಬಂಧಿತ ಕಟ್ಟಡವನ್ನು ನಗರಸಭೆ ಸ್ವಾಧೀನಪಡಿಸಿಕೊಳ್ಳುವುದಾಗಿ ಹಾಗೂ ನಗರಸಭೆಯಲ್ಲಿ ಜಮಾ ಮಾಡಿದ ಡಿಪಾಸಿಟ್ ಮೊತ್ತವನ್ನು ನಗರಸಭೆಯ ನಿಧಿಗೆ ಸೇರಿಸಲಾಗುವುದಾಗಿ 20/01/2026 ರಂದು 4857246-2026 ಸಂಖ್ಯೆಯ ನೋಟಿಸ್ ಮೂಲಕ ತಿಳಿಸಲಾಗಿದೆ.
ಆದರೆ 31/01/2026 ರಂದು ರಿಷಾಲ್ ಕೆ.ಎಂ ಅವರು ಮಾನ್ಯ ನಗರಸಭೆ ಅಧ್ಯಕ್ಷರಿಗೆ ಅಪೀಲ್ ಅರ್ಜಿ ಸಲ್ಲಿಸಿರುವುದರಿಂದ, ಆ ಅಪೀಲ್ ಅರ್ಜಿಯ ಮೇಲೆ ಇಂದು ನಡೆದ ನಗರಸಭಾ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಯಿತು. ನಿಯಮಾನುಸ್ತ್ರತ ವಾಗಿ ನಗರಸಭಾ ಕಾರ್ಯದರ್ಶಿ ತೆಗೆದುಕೊಂಡ ತೀರ್ಮಾನವನ್ನು ಅಮಾನ್ಯ ಗೊಳಿಸಿ ರಿಷಾದ್ ಅವರಿಗೆ ಪುನಃ ಕಟ್ಟಡದಲ್ಲಿ ಕಾರ್ಯಾಚರಿಸಲು ಅನುಮತಿ ಕೊಡಲು ನಗರಸಭಾ ಚೈಪರ್ಸೋನ್ ತಯಾರಾದಾಗ
. ಎದ್ದುನಿಂತ ಬಿಜೆಪಿ ಸದಸ್ಯರು ಅನುಮತಿ ಕೊಡಬಾರದು, ಅಧಿಕಾರ ಬಲದಿಂದ ರಿಷಾದ್ ಎಂಬವರು ನಿರ್ಮಿಸಿದ ಅನಧಿಕೃತ ನಿರ್ಮಾಣಕ್ಕೆ ಬಹಿರಂಗ ಬೆಂಬಲ ಸೂಚಿಸಿ ಅನಧಿಕೃತ ನಿರ್ಮಾಣ ನಡೆಸಿದ್ದು ಸರಿ ಎಂದು ಸಾರುವ ಲೀಗ್ ಆಡಳಿತದ ವಿರುದ್ಧ ನಗರಸಭಾ ಸಾಮಾನ್ಯ ಸಭೆಯಲ್ಲಿ ವಿರೋಧಪಕ್ಷದ ನಾಯಕ ಶ್ರೀ ರವೀಂದ್ರ ಪೂಜಾರಿಯವರ ನೇತೃತ್ವದಲ್ಲಿ ಪ್ರತಿಭಟಿಸಲಾಯಿತು.
