ದುಬೈ : ಪೊಲದವರ ಯಾನೆ ಗಟ್ಟಿ ಸಮಾಜ, ದುಬೈ ಇವರ ವತಿಯಿಂದ ಶ್ರೀ ಸತ್ಯನಾರಾಯಣ ದೇವರ ಪೂಜೆಯು ದಿನಾಂಕ ದುಬೈಯ ನ್ಯೂ ಅಕಾಡೆಮಿ ಸ್ಕೂಲ್ ಸಭಾಭವನದಲ್ಲಿ ಭಕ್ತಿ-ಶ್ರದ್ಧಾಪೂರ್ವಕವಾಗಿ ಜರಗಿತು.
ಕಾರ್ಯಕ್ರಮದಲ್ಲಿ ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿಯಿಂದ ಭಜನೆಗಳು ನೆರವೇರಿದವು. ನಂತರ ಎಸ್.ಪಿ.ಬಿ. ಬ್ಯಾಂಡ್ ವತಿಯಿಂದ ಭಕ್ತಿಭಾವಪೂರ್ಣ ಬ್ಯಾಂಡ್ ಸೇವೆ ಸಲ್ಲಿಸಲಾಯಿತು. ಈ ಭಜನೆ ಹಾಗೂ ಬ್ಯಾಂಡ್ ಸೇವೆ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿತ್ತು.
ಮರಳು ನಾಡಿನಲ್ಲಿ ತಮ್ಮದೇ ಶೈಲಿಯಲ್ಲಿ ಸಮಾಜದಲ್ಲಿ ಗುರುತಿಸಿಕೊಂಡ ಗಣ್ಯ ವ್ಯಕ್ತಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಪೂಜಾ ಕಾರ್ಯದಲ್ಲಿ ಗಟ್ಟಿ ಸಮಾಜ ದುಬೈಯ ಎಲ್ಲಾ ಸದಸ್ಯರು ಸಕ್ರಿಯವಾಗಿ ಭಾಗವಹಿಸಿ, ತಮ್ಮದೇ ರೀತಿಯಲ್ಲಿ ಸೇವೆಯಲ್ಲಿ ತೊಡಗಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಿದರು. ಸಮಾರಂಭವು ಭಕ್ತಿಭಾವ, ಏಕತೆ ಹಾಗೂ ಸೌಹಾರ್ದತೆಯ ಸಂದೇಶವನ್ನು ಸಾರಿತು.
Tags
ದುಬೈ
