ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ(ರಿ) ಕಾಸರಗೋಡು ಇದರ ವತಿಯಿಂದ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗಾಗಿ ಬದಲಾದ ಹೊಸ ಪಠ್ಯಕ್ರಮಕ್ಕೆ ಅನುಗುಣವಾಗಿ ನಡೆಯುತ್ತಿರುವ “ಸಿ.ಎಂ ಕಿಡ್ಸ್ ಸ್ಕೋಲರ್ಶಿಪ್ ಎಲ್.ಪಿ , ಯು.ಪಿ ಎಕ್ಸಾಮ್ 2026” (ಎಲ್.ಎಸ್.ಎಸ್, ಯು.ಎಸ್.ಎಸ್) ಪರೀಕ್ಷೆಗೆ ಅನ್ವಯವಾಗುವ ರೀತಿಯಲ್ಲಿ ನುರಿತ ಅಧ್ಯಾಪಕರುಗಳಿಂದ ಸಿದ್ಧಪಡಿಸಲಾದ ಪರೀಕ್ಷಾ ಮಾರ್ಗದರ್ಶಿ ಪುಸ್ತಕಗಳನ್ನು ಕಾಸರಗೋಡು ಜಿಲ್ಲಾ ಶಿಕ್ಷಣ ಉಪನಿರ್ದೇಶಕರಾದ ಶ್ರೀ. ಇಬ್ರಾಹಿಂ ಬುಡ್ರಿಯ ರವರು ಬಿಡುಗಡೆಗೊಳಿಸಿದರು. ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಕೇಂದ್ರ ಸಮಿತಿಯ ಅಧ್ಯಕ್ಷರಾದ ಸುಕೇಶ ಎ, ಪ್ರಧಾನ ಕಾರ್ಯದರ್ಶಿ ಪ್ರದೀಪ್ ಶೆಟ್ಟಿ ಬೇಳ, ಕೋಶಾಧಿಕಾರಿ ಶರತ್ ಕುಮಾರ್ ಯಂ, ಅಧಿಕೃತ ವಕ್ತಾರರಾದ ಬಾಬು ಕೆ ಉಪಸ್ಥಿತರಿದ್ದರು.
Tags
ಕಾಸರಗೋಡು
