ಆರಿಕ್ಕಾಡಿ ಟೋಲ್ ಸಂಗ್ರಹ ಕೇಂದ್ರ ಮುಚ್ಚುಗಡೆಗೆ ಕೇಂದ್ರ ಸಾರಿಗೆ ಸಚಿವಾಲಯ ನಿರ್ದಾರ


 ಕುಂಬಳೆ: ಇಲ್ಲಿನ ಆರಿಕ್ಕಾಡಿಯಲ್ಲಿ ಆರಂಭಿಸಿರುವ ಅನಧಿಕೃತ ಟೋಲ್ ವಸೂಲಿ ಕೇಂದ್ರದ ಮುಚ್ಚುಗಡೆಗೆ ಕೇಂದ್ರ ಸಾರಿಗೆ ಸಚಿವಾಲಯ ಆದೇಶ ನೀಡಿದೆ.‌ ಮುಂದಿನ 24 ಗಂಟೆಗಳೊಳಗೆ  ಟೋಲ್ ಗೇಟು ಮುಚ್ಚಲಾಗುವುದು ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಎಂ.ಎಲ್. ತಿಳಿಸಿದ್ದಾರೆ. ಅನಧಿಕೃತ ಟೋಲ್ ವಸೂಲಿ ಕೇಂದ್ರದ ವಿರುದ್ದ ವ್ಯಾಪಕ ಪ್ರತಿಭಟನೆ ನಡೆದಿತ್ತು. ಸ್ಥಳೀಯರು ಟೋಲ್ ಕೇಂದ್ರದ ವಿರುದ್ದ ಹೈಕೋರ್ಟಿನಲ್ಲಿ ದೂರು ಸಲ್ಲಿಸಿದ್ದರು.

     ಅನಧಿಕೃತ ಟೋಲ್ ವಸೂಲಿ ಕೇಂದ್ರದ ಮುಚ್ಚುಗಡೆಗೆ ತೀರ್ಮಾನ ಕೈಗೊಂಡ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಬಿಜೆಪಿ ಮುಖಂಡ ಕೆ.ಸುರೇಂದ್ರನ್ ಅಭಿನಂದಿಸಿದ್ದಾರೆ.

 ಕಾಸರಗೋಡು,  ಕುಂಬಳೆ ಎಂಬೆಡೆಗಳಲ್ಲಿ ಬಿಜೆಪಿ ವಿಜಯೋತ್ಸವ:


ಆರಿಕ್ಕಾಡಿ ಟೋಲ್ ವಸೂಲಿ ಕೇಂದ್ರ ರದ್ದತಿ ತೀರ್ಮಾನವನ್ನು ಸ್ವಾಗತಿಸಿ ಬಿಜೆಪಿ ಆಶ್ರಯದಲ್ಲಿ ಕಾಸರಗೋಡು ಹಾಗೂ ಕುಂಬಳೆ ಪೇಟೆಯಲ್ಲಿ ವಿಜಯೋತ್ಸವ ಮೆರವಣಿಗೆ ನಡೆಯಿತು. ಕಾಸರಗೋಡು ಪೇಟೆಯಲ್ಲಿ ನಡೆದ ಮೆರವಣಿಗೆಯಲ್ಲಿ ಜಿಲ್ಲಾಧ್ಯಕ್ಷೆ ಅಶ್ವಿನಿ  ಎಂ. ಎಲ್, ಪಿ.ರಮೇಶ್, ಸುನಿಲ್ ಪಿ.ಆರದ, ಸುಕುಮಾರ ಕುದ್ರೆಪ್ಪಾಡಿ ಮೊದಲಾದವರು ನೇತೃತ್ವ ವಹಿಸಿದರು.

    ಕುಂಬಳೆಯಲ್ಲಿ ನಡೆದ ವಿಜಯೋತ್ಸವದಲ್ಲಿ‌ ಪಕ್ಷದ ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಎಂ.ಎಲ್, ವಲಯ ಉಪಾಧ್ಯಕ್ಷ ವಿಜಯ ಕುಮಾರ್ ರೈ, ಮುರಳೀಧರ ಯಾದವ್ ಸಹಿತ ಹಲವು‌ ಮುಖಂಡರು ನೇತೃತ್ವ ವಹಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು