ಬಿಜೆಪಿ ಮಂಜೇಶ್ವರ ವಿಧಾನಸಭಾ ಮಂಡಲ ಚುನಾವಣಾ ಸಭೆ, ಕೆ.ಸುರೇಂದ್ರನ್ ಉದ್ಘಾಟನೆ


 ಮಂಜೇಶ್ವರ: ವಿಧಾನ ಸಭಾ ಚುನಾವಣೆಯ ಪೂರ್ವ ಸಿದ್ದತೆಯಂತೆ ಮಂಜೇಶ್ವರ ವಿಧಾನಸಭಾ ಮಂಡಲ ಬಿಜೆಪಿ ಬೂತು, ಶಕ್ತಿಕೇಂದ್ರ ಇನ್ ಚಾರ್ಜ್ ಗಳ ಸಭೆ ನಡೆಯಿತು. ಬಿಜೆಪಿ ಮಾಜಿ ಅಧ್ಯಕ್ಷ ಕೆ.ಸುರೇಂದ್ರನ್ ಉದ್ಘಾಟಿಸಿದರು. 
ಪಕ್ಷದ ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಎಂ.ಎಲ್ ಅಧ್ಯಕ್ಷತೆ ವಹಿಸಿದರು.

 ರಾಜ್ಯ ಸಮಿತಿ ಸದಸ್ಯರುಗಳಾದ ವಿ.ರವೀಂದ್ರನ್, ಸತೀಶ್ಚಂದ್ರ ಭಂಡಾರಿ, ವಲಯ ಉಪಾಧ್ಯಕ್ಷ ವಿಜಯ ಕುಮಾರ್ ರೈ, ಜಿಲ್ಲಾ ಉಪಾಧ್ಯಕ್ಷರುಗಳಾದ ಪಿ.ರಮೇಶ್, ಮಣಿಕಂಠ ರೈ, ಮರಳೀಧರ ಯಾದವ್, ಜಿಲ್ಲಾ ಕಾರ್ಯದರ್ಶಿಗಳಾದ ಎನ್.ಮಧು, ಲೋಕೇಶ್ ನೋಂಡ, ಇತರರಾದ ಹತೀಶ್ಚಂದ್ರ ಮಂಜೇಶ್ವರ, ಪದ್ಮನಾಭ ಕಡಪ್ಪುರ, ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ್.ಬಿ.ಎಂ, ಕುಂಬಳೆ ಮಂಡಲ ಅಧ್ಯಕ್ಷ ಸುನಿಲ್ ಅನಂತಪುರ ಮೊದಲಾದವರು ಮಾತನಾಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು