ಕುಂಬಳೆ: 23.4 ಲೀಟರ್ ಕರ್ಣಾಟಕ ನಿರ್ಮಿತ ವಿದೇಶ ಮದ್ಯ ಸಹಿತ ಓರ್ವನನ್ನು ಎಕ್ಸ್ಪ್ರೆಸ್ ಅಧಿಕಾರಿಗಳು ಬಂಧಿಸಿದ್ದಾರೆ. ಮಂಗಲ್ಪಾಡಿ ಅಡ್ಕ ಬಳಿಯ ಹರಶ್(36) ಬಂಧಿತ ಆರೋಪಿ. ಕುಂಬಳೆ ಎಕ್ಸ್ಪ್ರೆಸ್ ರೇಂಜ್ ಪ್ರಿವೆಂಟಿವ್ ಆಫೀಸರ್ ಜಿಜಿನ್ ಎಂ.ವಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಇತರ ಅಧಿಕಾರಿಗಳಾದ ಮೊಯ್ದೀನ್ ಸಾದಿಕ್, ಅವಿನಾಶ್ ವಿ ಮೊದಲಾದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.
Tags
ಕುಂಬಳೆ
