ಕಾಸರಗೋಡು: ರಾಜ್ಯ ವಿಧಾನಸಭೆಯ ವಿರೋಧ ಪಕ್ಷ ನಾಯಕ, ಕಾಂಗ್ರೆಸ್ ನೇತಾರ ವಿ.ಡಿ.ಸತೀಶನ್ ನೇತೃತ್ವದಲ್ಲಿ ಪುದು ಯುಗ ಯಾತ್ರ (ನವಯುಗ ಯಾತ್ರೆ) ಈ ತಿಂಗಳ 6 ರಂದು ಕುಂಬಳೆಯಿಂದ ಹೊರಡಲಿದೆ. ಅಂದು ಸಂಜೆ 4 ಗಂಟೆಗೆ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಸಂಸದ ಕೆ.ಸಿ.ವೇಣುಗೋಪಾಲ ಉದ್ಘಾಟಿಸುವರು. ಅಂದು ರಾತ್ರಿ 7 ಗಂಟೆಗೆ ನವಯುಗ ಯಾತ್ರೆ ಕಾಸರಗೋಡು ತಲುಪಲಿದೆ. ಎಲ್ಲ ಜಿಲ್ಲೆಗಳಲ್ಲೂ ವಿವಿದ ವಲಯಗಳಲ್ಲಿನ ಪ್ತಮುಖರ ಜತೆ ಯಾತ್ರೆಯ ವೇಳೆ ಚರ್ಚೆನಡೆಸಲಾಗುವುದು. ಮಾರ್ಚ್ 6 ರಂದು ಯಾತ್ರೆ ಕೊನೆಗೊಳ್ಳಲಿದೆ.
ನವಯುಗ ಯಾತ್ರೆಹ ಯಶಸ್ವಿಗಾಗಿ ಈಗಾಗಲೇ ವ್ಯಾಪಕ ಸಿದ್ದತೆ ನಡೆದಿದೆ. ಬೂತು ಮಟ್ಟದಿಂದಲೇ ಕಾರ್ಯಕರ್ತರನ್ನು ಹೊರಡಿಸುವ ಪ್ರಯತ್ನ ನಡೆದಿದೆ. ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ಉದ್ದೇಶದಿಂದ ಯಾತ್ರೆ ನಡೆಸಲಾಗುತ್ತದೆ
Tags
ಕಾಸರಗೋಡು
