ಕಾಸರಗೋಡು: ಇಲಿವಿಷ ಬಿದ್ದ ಗ್ಲಾಸಿನಲ್ಲಿ ನೀರು ಕುಡಿದ ಮಹಿಳೆ ಮೃತಪಟ್ಟ ದಾರುಣ ಘಟನೆ ನಡೆದಿದೆ. ರಾಜಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಪನತ್ತಡಿ ಮೊಟ್ಟಚ್ಚಾಲ್ ನಿವಾಸಿ ಬಿ.ಪಿ.ಶೋಭನ (53) ಮೃತಪಟ್ಟ ಮಹಿಳೆ. ಕೋಜಿಕ್ಕೋಎಉ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದರು. ಜನವರಿ 28 ರಂದು ರಾತ್ರಿ ಘಟನೆ ನಡೆದಿತ್ತು. ಮನೆಯಲ್ಲಿ ಇಲಿಯ ಕಾಟ ವಿಪರೀತವಾದ ಹಿನ್ನೆಲೆಯಲ್ಲಿ ಶೋಭನ ಅವರು ಇಲಿವಿಷ ಇಟ್ಡಿದ್ದರು. ಈ ವೇಳೆ ಬಳಿಯಲ್ಲಿಯೇ ಇದ್ದ ಗ್ಲಾಸಿಗೆ ಇಲಿವಿಷ ಬಿದ್ದಿತೆನ್ನಲಾಗಿದೆ. ಇದು ತಿಳಿಯದ ಶೋಭನ ಅದೇ ಗ್ಲಾಸಿನಲ್ಲಿ ನೀರು ತುಂಬಿಸಿ ಕುಡಿದರು.
ನೀರು ಕುಡಿದ ಕೂಡಲೇ ಅವರಿಗೆ ಹೊಟ್ಟೆನೋವು ಶುರುವಾಯಿತು. ಕೂಡಲೇ ಅವರನ್ನು ಪೆರಿಯಾರಂ ಮೆಡಿಕಲ್ ಕಾಲೇಜಿಗೂ ಅನಂತರ ಕೋಜಿಕ್ಕೋಡು ಆಸ್ಪತ್ರೆಗೂ ಕೊಂಡೊಯ್ಯಲಾಯಿತು. ಅಲ್ಲಿ ಅವರು ಇಂದು ಕೊನೆಯುಸಿರೆಳೆದರು.
ರಾಜಪುರಂ ಪೊಲೀಸರು ಕೇಸು ದಾಖಲಿಸಿದರು. ಮೃತರು ಮಕ್ಕಳಾದ ಸನೀಶ್, ಸುಚಿತ್ರ ಎಂಬಿವರನ್ನು ಅಗಲಿದ್ದಾರೆ.
Tags
ಕಾಸರಗೋಡು
