ಮೀಯಪದವು, ವಿದ್ಯಾವರ್ಧಕ ಎ ಯು ಪಿ ಶಾಲೆ ಮೀಯಪದವಿಗೆ ರಿಲಯನ್ಸ್ ಫೌಂಡೇಶನ್ ವತಿಯಿಂದ ಉಚಿತವಾಗಿ ದೊರಕಿದ ನೂತನ ಶಾಲಾ ವಾಹನದ ಉದ್ಘಾಟನಾ ಕಾರ್ಯಕ್ರಮ ಶಾಲಾ ರಾಮಕೃಷ್ಣ ರಾವ್ ಸಭಾಂಗಣದಲ್ಲಿ ಜರುಗಿತು ಕಾರ್ಯಕ್ರಮವನ್ನು ಮೀಂಬಿ ಪಂಚಾಯತ್ ಅಧ್ಯಕ್ಷರಾದ ಸಿ ಎ ತಾಜುದ್ದೀನ್ ಉದ್ಘಾಟಿಸಿ ಶುಭಕೋರಿದರು ಶಾಲಾ ಆಡಳಿತ ಸಲಹೆಗಾರರಾದ ಶ್ರೀಧರ್ ರಾವ್ ಆರ್. ಪ್ರಾಸ್ತವಿಕವಾಗಿ ನುಡಿದು ಅತಿಥಿಗಳನ್ನು ಸ್ವಾಗತಿಸಿದರು ಕಾರ್ಯಕ್ರಮಕ್ಕೆ ಮೀಂಜ ವಾರ್ಡ್ ಸದಸ್ಯರಾದ ಸಿದ್ದಿಕ್ ಕೆ ಎಂ ಶಾಲಾ ಮುಖ್ಯ ಶಿಕ್ಷಕ ಅರವಿಂದಾಕ್ಷ ಭಂಡಾರಿ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ನೂತನವಾಗಿ ಪಂಚಾಯತ್ ನ ಅಧಿಕಾರವನ್ನು ಸ್ವೀಕರಿಸಿದ ಸಿ.ಎ ತಾಜುದ್ದೀನ್ ಹಾಗೂ ಸಿದ್ದಿಕ್ ಕೆ ಎಂ ಇವರನ್ನು ಶಾಲಾ ವತಿಯಿಂದ ಶಾಲು ಹೊದಿಸಿ ಫಲಪುಷ್ಪ ನೀಡಿ ಗೌರವಿಸಲಾಯಿತು ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕಿ ರಾಜೇಶ್ವರಿ ಎಸ್ ರಾವ್, ಪಿಟಿಎ ಅಧ್ಯಕ್ಷರಾದ ಜಗದೀಶ್ ಸಿ ಶೆಟ್ಟಿಗಾರ್ ಹಾಗೂ ಮಾತೃ ಮಂಡಳಿ ಅಧ್ಯಕ್ಷೆ ಅಶ್ಲೇಷ ಜಿ ರಾವ್ ಉಪಸ್ಥಿತರಿದ್ದರು ಕಾರ್ಯಕ್ರಮವನ್ನು ಅಧ್ಯಾಪಕ ರಘುವೀರ್ ರಾವ್ ನಿರೂಪಿಸಿದರು. ಸ್ಪಾಫ್ ಸೆಕ್ರೆಟರಿ ರಾಮಚಂದ್ರ ಕೆ ಎಂ ವಂದಿಸಿದರು.
Tags
ಉಪ್ಪಳ
