ಬದಿಯಡ್ಕ: 4.5 ಲೀಟರ್ ಕೇರಳ ನಿರ್ಮಿತ ವಿದೇಶ ಮದ್ಯ ಸಹಿತ ಓರ್ವನನ್ನು ಬದಿಯಡ್ಕ ಎಕ್ಸ್ಪ್ರೆಸ್ ರೇಂಜ್ ಇನ್ಸ್ಪೆಕ್ಟರ್ ಬಿ.ಎಂ.ಅಬ್ದುಲ್ಲ ನೇತೃತ್ವದಲ್ಲಿ ಬಂಧಿಸಲಾಗಿದೆ. ಗೋಳಿಯಡ್ಕ ನಿವಾಸಿ ರಾಮ.ಕೆ(48) ಬಂಧಿತ ಆರೋಪಿ. ಉನ್ನತಿಗಳ ಕೇಂದ್ರೀಕರಿಸಿ ವ್ಯಾಪಕ ಮದ್ಯ ಮಾರಾಟ ನಡೆಯುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ದಾಳಿ ನಡೆದಿತ್ತು ಎಕ್ಸ್ಪ್ರೆಸ್ ಅಧಿಕಾರಿಗಳಾದ ಮಂಜುನಾಥ ಆಳ್ವ, ಜಿ.ಎಸ್.ಲಿಜು, ವಿನೋದ್ ಬಿ, ಧನ್ಯ ಮೊದಲಾದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದರು. ಆರೋಪಿಯನ್ನು ಜಾಮೀನು ಮೂಲಕ ಬಿಡುಗಡೆಗೊಳಿಸಲಾಯಿತು.
Tags
ಬದಿಯಡ್ಕ
