ಬದಿಯಡ್ಕ: ರಸ್ತೆ ಬದಿಯಲ್ಲಿ ನಿಂತು ಮಹಿಳೆಯರಿಗೂ ಮಕ್ಕಳಿಗೂ ಕೈಯಿಂದ ಸಂಜ್ಞೆ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಗೋಳಿಯಡ್ಕ ಶಾಂತಿಪಳ್ಳ ನಿವಾಸಿ ಅಜ್ಮಲ್ ಇರ್ಷಾದ್ (26) ಬಂಧಿತ ಆರೋಪಿ.ನೀರ್ಚಾಲು ಶಾಲೆಯಿಂದ ಮನೆಗೆ ಹಿಂತಿರುಗುವ ವಿದ್ಯಾರ್ಥಿನಿಯರನ್ನು ಹಾಗೂ ಬಸ್ಸಿಗಾಗಿ ನಿಂತಿರುವ ಮಹಿಳೆಯರನ್ನು ಈತ ಉಪದ್ರವ ಮಾಡಲು ಯತ್ನಿಸಿದ್ದನೆನ್ನಲಾಗಿದೆ. ಈ ಬಗ್ಗೆ ವಿದ್ಯಾರ್ಥಿನಿಯರು ಹಾಗೂ ಹೆತ್ತವರು ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದರು
Tags
ಬದಿಯಡ್ಕ
