ಕಾಸರಗೋಡು: ಜರ್ಮನಿಗೆ ವೀಸಾ ನೀಡುವ ವಾಗ್ದಾನ ನೀಡಿ ಲಕ್ಷಾಂತರ ರೂ ಪಡೆದು ವಂಚಿಸಿದ ಪ್ರಕರಣದ ಆರೋಪಿಯನ್ನು ಬೆಂಗಳೂರು ದಾಬರ್ ಪೇಟೆಯಿಂದ ಬಂಧಿಸಲಾಗಿದೆ. ಭೀಮನಡಿ ನಿವಾಸಿ ಜಿನ್ ಥೋಮಸ್(30) ಬಂಧಿತ ಆರೋಪಿ.ಹೊಸದುರ್ಗ ಪೊಲೀಸರು ಸೈಬರ್ ಪೊಲೀಸರ ಸಹಾಯದೊಂದಿಗೆ ಈತನನ್ನು ಬಂಧಿಸಿದ್ದಾರೆ.
ಹೊಸದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯ ವ್ಯಕ್ತಿಯೋರ್ವರಿಗೆ ಜರ್ಮನಿಯ ವೀಸಾ ನೀಡುವುದಾಗಿ ಹೇಳಿ 8 ಲಕ್ಷ ರೂ ಪಡೆದು ವಂಚಿಸಿದನೆನ್ನಲಾಗಿದೆ. ಅನಂತರ ಈತ ನಾಪತ್ತೆಯಾಗಿದ್ದು ನೆಲಮಂಗಲ ಬಳಿಯ ಹೋಟೆಲ್ ಒಂದರಲ್ಲಿ ಮೆನೇಜರ್ ಆಗಿ ಕೆಲಸಕ್ಕೆ ಸೇರಿದ್ದನು. ಈ ಮಾಹಿತಿ ತಿಳಿದ ಪೊಲೀಸರ ಈತನನ್ನು ಬಂಧಿಸಿದ್ದಾರೆ.
Tags
ಕಾಸರಗೋಡು
