ಎದೆಹಾಲು ಗಂಟಲಲ್ಲಿ ಸಿಲುಕಿ 50 ದಿನಗಳ ಪ್ರಾಯದ ಮಗು ಮೃತ್ಯು


 ಕುಂಬಳೆ: ಎದೆಹಾಲು ಗಂಟಲಲ್ಲಿ ಸಿಲುಕಿ 50 ದಿನಗಳ ಪ್ರಾಯದ ಮಗು ಮೃತಪಟ್ಟ ಘಟನೆ ನಡೆದಿದೆ. ಕುಂಬಳೆ ಪೊಲೀಸ್ ಠಾಣಾ ವ್ಯಾಪ್ತಿಯ ಮೊಗ್ರಾಲು ಪೇರಾಲ್ ಮಡಿಮೊಗರು ಮುಹಮ್ಮದ್ ರಾಹೀದ್- ಮರಿಯತ್ ಸಾಬಿ ದಂಪತಿಯ ಪುತ್ರ ಲಾಸಿನ್ ಇಮಾತ್ ಮೃತಪಟ್ಟ ಮಗು. ನಿನ್ನೆ (ಸೋಮವಾರ) ರಾತ್ರಿ ಘಟನೆ ನಡೆದಿದೆ. ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡುಬಂದ‌ ಮಗುವನ್ನು ‌ಕೂಡಲೇ ಕಾಸರಗೋಡು ಜನರಲ್ ಆಸ್ಪತ್ರೆಗೆ ಕೊಂಡೊಯ್ದರೂ ಪ್ರಾಣ ಉಳಿಸಲಾಗಲಿಲ್ಲ ಎಂದು ತಿಳಿದು ಬಂದಿದೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು