ಕುಂಜತ್ತೂರು ಕೊಲೆ ಪ್ರಕರಣ; ಗಂಭೀರ ಗಾಯಗೊಂಡಿದ್ದ ಇನ್ನೋರ್ವ ಮಂಗಳೂರು ಆಸ್ಪತ್ರೆಯಲ್ಲಿ‌ ಮೃತ್ಯು



 ಮಂಜೇಶ್ವರ: ಕುಂಜತ್ತೂರಿನಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಸಾವಿನ ಸಂಖ್ಯೆ 2 ಕ್ಕೇರಿದೆ. ಗಂಭೀರ ಗಾಯಗೊಂಡ ಶೇಕುಞ ಎಂಬವರು ಮಂಗಳೂರು ಆಸ್ಪತ್ರೆಯಲ್ಲಿ ಇಂದು (ಮಂಗಳವಾರ) ಬೆಳಗ್ಗೆ ಕೊನೆಯುಸಿರೆಳೆದರು. ಇವರ ಕಾಲಿಗೆ ಇರಿತದಿಂದ ಗಂಭೀರ ಗಾಯವಾಗಿತ್ತು. ಈ ಪ್ರಕರಣದಲ್ಲಿ  ಜುಮೈಲ ಎಂಬಾಕೆ ನಿನ್ನೆ ರಾತ್ರಿ ಮೃತಪಟ್ಟಿದ್ದಳು.  ಈ ಘಟನೆಗೆ ಸಂಬಂಧಿಸಿದಂತೆ ಜುಮೈಲಳ ತಂದೆ ಉಮ್ಮರ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು