ಕಾಸರಗೋಡು: ಗೃಹಸ್ಥರೋರ್ವರ ಮೃತದೇಹ ಮನೆಯ ಸಮೀಪ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ವಾಝುನ್ನೋರೋಡಿ ಕುಟ್ಟಿಯಾಂ ತೋಲ್ ನಿವಾಸಿ ಜಯನ್ (56) ಮೃತಪಟ್ಟವರು.
ಸೋಮವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಪುದುಕ್ಕೆ ಭೂತಾನಂ ಕೊಂಗಿಣಿಯನ್ ವಳಪ್ಪಿಲ್ನಲ್ಲಿರುವ ಹಳೆಯ ಮನೆಯ ಸಮೀಪದ ಶೌಚಾಲಯದಲ್ಲಿ ಇವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು. ಮೃತದೇಹವನ್ನು ಕಾಂಞಂಗಾಡ್ ಜಿಲ್ಲಾ ಆಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದೆ.
ಇವರ ಪತ್ನಿ ದಾಕ್ಷಾಯಣಿ ಎರಡು ವರ್ಷಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದರಿಂದಾಗಿ ಜಯನ್ ಅವರು ತೀವ್ರ ಮಾನಸಿಕ ನೆಮ್ಮದಿ ಕಳೆದುಕೊಂಡಿದ್ದರು ಎಂದು ಹೇಳಲಾಗಿದೆ.
- ಮಕ್ಕಳು: ಅಜೇಶ್, ಅಂಜುನ.
- ಸಹೋದರರು: ಚಂದ್ರನ್, ವಿಜಯನ್, ಬೇಬಿ, ಮೋಹನ್.
Tags
ಕಾಞಂಗಾಡ್
