ಆವರಣವಿಲ್ಲದ ಬಾವಿಗೆ ಬಿದ್ದು ಮಧ್ಯವಯಸ್ಕ ಮೃತ್ಯು


 

ಕುಂಬಳೆ: ಆವರಣವಿಲ್ಲದ (ಸುರಕ್ಷತಾ ತಡೆಯಿಲ್ಲದ) ಬಾವಿಗೆ ಬಿದ್ದು ಮಧ್ಯವಯಸ್ಕರೊಬ್ಬರು ಮೃತಪಟ್ಟ ಘಟನೆ ನಡೆದಿದೆ. ಕಳತ್ತೂರು ಕಾರಿಂಜ ಅಳಮನೆ ನಿವಾಸಿ ಸಂಜೀವ (55) ಮೃತಪಟ್ಟ ವ್ಯಕ್ತಿ.

ಹಗಲಿನ ವೇಳೆಯಲ್ಲಿ ಅವರು ಮನೆಯಲ್ಲಿ ಒಬ್ಬರೇ ಇದ್ದರು. ಮಗ ಪೃಥ್ವಿರಾಜ್ ಕಾಲೇಜಿಗೆ ಮತ್ತು ಪತ್ನಿ ಸುಜಾತ ಕೆಲಸಕ್ಕೆ ಹೋಗಿದ್ದರು. ಸಂಜೆ ಮಗ ಮನೆಗೆ ಬಂದಾಗ ಸಂಜೀವ ಅವರು ಕಾಣೆಯಾಗಿದ್ದರು. ಬಳಿಕ ನಡೆಸಿದ ಹುಡುಕಾಟದಲ್ಲಿ ಅವರು ಬಾವಿಯಲ್ಲಿ ಬಿದ್ದಿರುವುದು ಕಂಡುಬಂದಿದೆ.

ಮಾಹಿತಿ ತಿಳಿದ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಅವರನ್ನು ಹೊರತೆಗೆದು ಕುಂಬಳೆ ಜಿಲ್ಲಾ ಸಹಕಾರ ಆಸ್ಪತ್ರೆಗೆ ತಲುಪಿಸಿದರಾದರೂ,  ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಆಕಸ್ಮಿಕವಾಗಿ ಬಾವಿಗೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ.

ಮೃತರು ಮಗಳು ಪ್ರತಿಭಾ, ಅಳಿಯ ಸುಕೇಶ್ ಹಾಗೂ ಸಹೋದರಿಯರಾದ ದೇವಕಿ, ಸಾವಿತ್ರಿ ಅವರನ್ನು ಅಗಲಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು