ಕಾಸರಗೋಡು: ಹಳದಿ ಕಾಮಾಲೆ ರೋಗದಿಂದ ಬಳಲುತ್ತಾ ಚಿಕಿತ್ಸೆ ಪಡೆಯುತ್ತಿದ್ದ ಯುವತಿಯೊಬ್ಬರು ಮೃತಪಟ್ಟಿದ್ದಾರೆ. ಬಾಯಾರ್ ಕನಿಯಾಲ ಚಿಮಿರಿತಡುಕದ ಲೋಕೇಶ್ ಎಂಬವರ ಪತ್ನಿ ಮಮತಾ (37) ಎಂಬವರು ಕಳೆದ ದಿನ ನಿಧನರಾದರು.
ಈ ಮೊದಲು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬಳಿಕ ನಡೆಸಿದ ವೈದ್ಯಕೀಯ ಪರೀಕ್ಷೆಯಲ್ಲಿ ಕಾಮಾಲೆ ರೋಗ ಉಲ್ಬಣಿಸಿರುವುದು ದೃಢಪಟ್ಟಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ತಲಶ್ಶೇರಿಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ.
ಪೆರ್ಮುದೆ ಮುನ್ನೂರುವಿನ ಸುಂದರ - ಲಲಿತ ದಂಪತಿಗಳ ಪುತ್ರಿಯಾಗಿದ್ದು, ವೃತ್ತಿಯಲ್ಲಿ ಬೀಡಿ ಕಾರ್ಮಿಕರಾಗಿದ್ದರು. ಮೃತರು ಪತಿ: ಲೋಕೇಶ್, ಮಕ್ಕಳಾದ ಭುವಿಷ, ತನುಷ್ಕಾ, ಸಹೋದರ-ಸಹೋದರಿಯರಾದ ಅನಿಲ್, ಸುನಿಲ್, ಅನಿತಾ ಎಂಬಿವರನ್ನು ಅಗಲಿದ್ದಾರೆ
Tags
ಮಂಜೇಶ್ವರ
