ಕಣ್ಣೂರು: ತಾಯಿ ಚಲಾಯಿಸಿದ ಸ್ಕೂಟರ್ ಮಗುಚಿ ಬಿದ್ದು ಐದು ವರ್ಷದ ಬಾಲಕಿ ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಕಾಪ್ಪಾಡ್ ಪಳ್ಳಿಪೊಯಿಲ್ ಕೆ.ಪಿ ಹೌಸ್‌ನ ಕೆ.ಪಿ ಆಶಿಫ್ ಮತ್ತು ಕದಲಾಯಿ ಶರೀಫಾಸಿಲ್ ಮುನೀರಾ ದಂಪತಿಯ ಪುತ್ರಿ ಐಸಲ್ ಮರಿಯಮ್ (5) ಮೃತಪಟ್ಟವರು. ನಿನ್ನೆ (ಶುಕ್ರವಾರ) ಮಧ್ಯಾಹ್ನದ ವೇಳೆ ತಾಯಿ ಮುನೀರಾ ಅವರೊಂದಿಗೆ ಸ್ಕೂಟರ್‌ನಲ್ಲಿ ಪ್ರಯಾಣಿಸುತ್ತಿದ್ದಾಗ, ಪಳ್ಳಿಪೊಯಿಲ್ ಮಹಾತ್ಮ ಮಂದಿರದ ಸಮೀಪ ಸ್ಕೂಟರ್ ಮಗುಚಿ ಬಿದ್ದು ಐಸಲ್ ಮರಿಯಮ್ ಅವರಿಗೆ ಗಾಯವಾಗಿತ್ತು. ಇಬ್ಬರನ್ನೂ ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಮರಿಯಮ್ ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ. ಪಳ್ಳಿಪೊಯಿಲ್ ಮಾಚೇರಿ ಮಾಪ್ಲಾ ಎಲ್.ಪಿ ಶಾಲೆಯ ವಿದ್ಯಾರ್ಥಿನಿಯಾಗಿರುವ ಐಸಲ್ ಮರಿಯಮ್ ನಿಧನರಾಗಿದ್ದಾರೆ. ಗಾಯಗೊಂಡಿರುವ ಮುನೀರಾ ಚಿಕಿತ್ಸೆ ಪಡೆಯುತ್ತಿದ್ದಾರೆ.
Tags
ಕಣ್ಣೂರು
