ಕೋಜಿಕ್ಕೋಡು: ಇಲ್ಲಿನ ಪೆರುವಯಲ್ ಕುಟ್ಟಿಕಾಟ್ಟೂರಿನಲ್ಲಿ ನಾಲ್ಕು ತಿಂಗಳ ಮಗುವನ್ನು ಕೊಲೆಗೈದ ಪ್ರಕರಣದಲ್ಲಿ ಮಗುವಿನ ತಂದೆ ಹಾಗೂ ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ. ಕುಟ್ಟಿಕಾಟ್ಟೂರು ನಿವಾಸಿ ಶಿಜಿನ್, ಪತ್ನಿ ಅಂಜನ ಬಂಧಿತ ದಂಪತಿ.
ಮಗು ರಾತ್ರಿ ಅಳುತ್ತಿತ್ತು. ಈ ವೇಳೆ ಮದ್ಯ ಸೇವಿಸಿ ಬಂದ ಶಿಜಿನ್, ಮಗುವಿನ ಅಳು ನಿಲ್ಲಿಸುವಂತೆ ಕಿರುಚಾಡಿದ್ದಾನೆ. ಮಗು ಅಳು ನಿಲ್ಲಿಸದೇ ಇದ್ದಾಗ ಥಳಿಸಿ ಕೊಲೆಗೈದನೆನ್ನಲಾಗಿದೆ. ಅಕ್ಟೋಬರ್ 1 ರಂದು ರಾತ್ರಿ ಈ ಘಟನೆ ನಡೆದಿತ್ತು. ಘಟನೆಯನ್ನು ಮುಚ್ಚಿಟ್ಟ ಕಾರಣಕ್ಕಾಗಿ ಅಂಜನಾಳನ್ನು ಬಂಧಿಸಲಾಗಿದೆ.
ಮಗು ಜೋರಾಗಿ ಅಳುತ್ತಿರುವ ಕಾರಣದಿಂದಾಗಿ ನಿದ್ದೆ ಮಾಡಲಾಗುತ್ತಿಲ್ಲ ಎಂದು ಹೇಳಿ ಮಧ್ಯ ಸೇವಿಸಿ ಬಂದ ಶಿಜಿನ್ ಕೊಲೆಗೈದಿದ್ದನು.
Tags
ಕೋಜಿಕ್ಕೋಡ್
