ಸೇವಾ ಸಂಕಲ್ಪ ಅಭಿಯಾನ್; ಕನ್ಯಪ್ಪಾಡಿ ಆಶ್ರಮದಲ್ಲಿ ವೈದ್ಯಕೀಯ ಶಿಬಿರ


ಬದಿಯಡ್ಕ: ಸೇವಾ ಸಂಕಲ್ಪ ಅಭಿಯಾನದ ಅಂಗವಾಗಿ ಬಿಜೆಪಿ ಬದಿಯಡ್ಕ ಪಂಚಾಯತ್ ಸಮಿತಿ, ಕನ್ಯಪಾಡಿ ಆಶ್ರಯ ಆಶ್ರಮ ಹಾಗೂ ಆಸ್ಟರ್ ಮಿಮ್ಸ್ ಆಸ್ಪತ್ರೆಯ ಸಹಯೋಗದೊಂದಿಗೆ ವೈದ್ಯಕೀಯ ಶಿಬಿರವನ್ನು ಕನ್ಯಪ್ಪಾಡಿ ಆಶ್ರಮದಲ್ಲಿ ಆಯೋಜಿಸಲಾಯಿತು. ಬಿಜೆಪಿ ಕಾಸರಗೋಡು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್. ಸುನಿಲ್ ಶಿಬಿರವನ್ನು ಉದ್ಘಾಟಿಸಿದರು.

          


     ಜನ್ಮತಃ ವಿಕಲಚೇತನರಾಗಿರುವ ಮಕ್ಕಳು ಸೇರಿದಂತೆ ದಿವ್ಯಾಂಗರಿಗೆ ಪಿಂಚಣಿ ಮಂಜೂರು ಮಾಡಿದ್ದು ಹಾಗೂ ಪಿಂಚಣಿ ಪಡೆಯಲು ಇದ್ದ ವೈಕಲ್ಯದ ಮಿತಿಯನ್ನು ಶೇ. 80 ರಿಂದ ಶೇ. 40ಕ್ಕೆ ಇಳಿಸಿದ್ದು ಮೋದಿ ಸರ್ಕಾರದ ಐತಿಹಾಸಿಕ ನಿರ್ಧಾರವಾಗಿದೆ ಎಂದು ಪಿ.ಆರ್. ಸುನಿಲ್ ಹೇಳಿದರು. ದಿವ್ಯಾಂಗರ ಕುರಿತು ಮೋದಿ ಸರ್ಕಾರಕ್ಕಿರುವ ಬದ್ಧತೆಯನ್ನು ಇಂತಹ ಕ್ರಮಗಳು ದೃಢಪಡಿಸುತ್ತವೆ ಎಂದು ಅವರು ಹೇಳಿದರು.

              ಜಿಲ್ಲೆಯಲ್ಲಿ ಸರಕಾರೀ ವಲಯದಲ್ಲಿ ಉತ್ತಮ ಚಿಕಿತ್ಸಾ ಸೌಲಭ್ಯಗಳಿರುವ ಸಂಸ್ಥೆಗಳ ಕೊರತೆ ಇರುವ ಹಿನ್ನೆಲೆಯಲ್ಲಿ, ಜನರಿಗೆ ಗುಣಮಟ್ಟದ ಚಿಕಿತ್ಸೆ ಒದಗಿಸುವಲ್ಲಿ ಖಾಸಗಿ ಆಸ್ಪತ್ರೆಗಳು ನಿರ್ಣಾಯಕ ಪಾತ್ರ ವಹಿಸುತ್ತಿವೆ ಎಂದೂ ಸುನಿಲ್ ಬೊಟ್ಟು ಮಾಡಿದರು.

            ಬಿಜೆಪಿ ಬದಿಯಡ್ಕ ವೆಸ್ಟ್ ಏರಿಯಾ ಅಧ್ಯಕ್ಷ ಹಾಗೂ ನೀರ್ಚಾಲು ಬ್ಲಾಕ್ ಡಿವಿಷನ್ ಸದಸ್ಯ ಮಹೇಶ್ ವಳಕ್ಕುಂಜ ಅಧ್ಯಕ್ಷತೆ ವಹಿಸಿದ್ದರು.

           ಬದಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗೂ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಡಿ. ಶಂಕರ, ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಹಾಗೂ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಕೆ.ಎಂ. ಅಶ್ವಿನಿ, ಬಿಜೆಪಿ ಸೆಲ್ ಸಂಯೋಜಕ ಸುಕುಮಾರ್ ಕುದ್ರೆಪ್ಪಾಡಿ, ಕನ್ಯಪಾಡಿ ಆಶ್ರಯ ಆಶ್ರಮದ ಅಧ್ಯಕ್ಷ ಶ್ರೀಕೃಷ್ಣ ಭಟ್, ಬಿಜೆಪಿ ಬದಿಯಡ್ಕ ಈಸ್ಟ್ ಏರಿಯಾ ಅಧ್ಯಕ್ಷ ಉದನೇಶ್ವರ, ಬಿಜೆಪಿ ಮಂಡಲ ಹಾಗೂ ಏರಿಯಾ ಸಮಿತಿ ಪದಾಧಿಕಾರಿಗಳು, ಜನಪ್ರತಿನಿಧಿಗಳು, ಆಸ್ಟರ್ ಮಿಮ್ಸ್ ಆಸ್ಪತ್ರೆಯ ಸರ್ಜಿಕಲ್ ಆಂಕೊಲಾಜಿಸ್ಟ್ ಡಾ. ಎನ್. ಅರವಿಂದ್ ನೇತೃತ್ವದ ವೈದ್ಯರ ತಂಡ ಮತ್ತು ಆಸ್ಪತ್ರೆಯ ಪ್ರತಿನಿಧಿಗಳು ಶಿಬಿರದ ನೇತೃತ್ವ ವಹಿಸಿದ್ದರು.

   ಮಂಡಲ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಎಂ, ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ  ರಜನಿ ಸಂದೀಪ್, ಅವಿನಾಶ್ ರೈ,  ಪಕ್ಷದ ಮುಖಂಡರುಗಳಾದ ನವಿನಾಕ್ಷ, ಪ್ರಶಾಂತ್ ಶೆಟ್ಟಿ,, ಶರತ್ ಶೆಟ್ಟಿ, ಗಂಗಾಧರ ಪಳ್ಳತ್ತಡ್ಕ,  ಸುಲೋಚನ, ಪ್ರೇಮ ಕುಮಾರಿ ಸಹಿತ ಹಲವರು ಉಪಸ್ಥಿತರಿದ್ದರು

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು