ಪಾಲಕ್ಕಾಡ್: ರಾಜ್ಯದಲ್ಲಿ ಖಾಸಗಿ ಬಸ್ಸುಗಳು ಮುಷ್ಕರ ಘೋಷಿಸಿವೆ. ನವೆಂಬರ್ ಮೂರರಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭವಾಗಲಿದೆ. ಬಸ್ ಮಾಲೀಕರ ಆರು ಸಂಘಟನೆಗಳು ಪಾಲಕ್ಕಾಡ್‌ನಲ್ಲಿ ನಡೆಸಿದ ಜಂಟಿ ಮುಷ್ಕರ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಕೇರಳ ಬಸ್ ಟ್ರಾನ್ಸ್‌ಪೋರ್ಟ್ ಅಸೋಸಿಯೇಷನ್, ಆಲ್ ಕೇರಳ ಬಸ್ ಆಪರೇಟರ್ಸ್ ಫೋರಂ, ಆಲ್ ಕೇರಳ ಬಸ್ ಆಪರೇಟರ್ಸ್ ಆರ್ಗನೈಸೇಷನ್, ಕೇರಳ ಪ್ರೈವೇಟ್ ಬಸ್ ಆಪರೇಟರ್ಸ್ ಅಸೋಸಿಯೇಷನ್, ಕೇರಳ ಬಸ್ ಆಪರೇಟರ್ಸ್ ಕೋ-ಆರ್ಡಿನೇಷನ್ ಕಮಿಟಿ ಸೇರಿದಂತೆ ಪ್ರಮುಖ ಸಂಘಟನೆಗಳ ನೇತೃತ್ವದಲ್ಲಿ ಈ ಅನಿರ್ದಿಷ್ಟಾವಧಿ ಮುಷ್ಕರವನ್ನು ಆಯೋಜಿಸಲಾಗಿದೆ. ಅಕ್ಟೋಬರ್ 10 ರಂದು ಸಾರಿಗೆ ಸಚಿವರೊಂದಿಗೆ ಚರ್ಚೆ ನಡೆಸಿದರೂ ಸಹ ಸೂಕ್ತ ನಿರ್ಧಾರ ಹೊರಬಾರದ ಹಿನ್ನೆಲೆಯಲ್ಲಿ ಈ ಮುಷ್ಕರ ಘೋಷಿಸಲಾಗಿದೆ ಎಂದು ತಿಳಿಸಲಾಗಿದೆ.
ಪ್ತಿಯದರ್ಶಿನಿ ಉಚಿತ ಸೇವೆಯ ಹಿನ್ನೆಲೆಯಲ್ಲಿ ಖಾಸಗಿ ಬಸ್ ವಲಯ ನಷ್ಟ ಅನುಭವಿಸುತ್ತಿದೆ. 400 ರಷ್ಡು ಬಸ್ಸುಗಳು ಯಾನ ನಿಲ್ಲಿಸಿದ್ದು 2 ಸಾವಿರ ಬಸ್ಸುಗಳು ಅದೇ ಹಾದಿಯಲ್ಲಿವೆ ಎಂದು ಆರೋಪಿಸಲಾಗಿದೆ.
Tags
ತಿರುವನಂತಪುರಂ
