ಕುರುಮುಜ್ಜಿಕಟ್ಟೆ ಶ್ರೀ ಧರ್ಮಶಾಸ್ತಾ ಭಜನ ಮಂದಿರದ 18ನೇ ವಾರ್ಷಿಕೋತ್ಸವ ಸಮಿತಿ ರೂಪೀಕರಣ ಸಭೆ


 

ಬದಿಯಡ್ಕ: ಕುರುಮುಜ್ಜಿಕಟ್ಟೆ ಶ್ರೀ ಧರ್ಮಶಾಸ್ತಾ ಭಜನ ಮಂದಿರದ 18ನೇ ವರ್ಷದ ಆಚರಣೆ ಹಾಗೂ ಶ್ರೀ ಅಯ್ಯಪ್ಪನ್ ತಿರುವಿಳಕ್ಕ್ ಮಹೋತ್ಸವದ ಯಶಸ್ಸಿಗಾಗಿ ಸಮಿತಿ ರೂಪೀಕರಣ ನಡೆಯಿತು. ಶ್ರೀ ಮಂದಿರದಲ್ಲಿ ಜರಗಿದ ಸಭೆಯನ್ನು ಧಾರ್ಮಿಕ ಮುಂದಾಳು ಹರಿನಾರಾಯಣ ಶಿರಂತಡ್ಕ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಾ ಧಾರ್ಮಿಕ ಕಾರ್ಯಗಳು ನಡೆದಷ್ಟು ನಮ್ಮ ಸಮಾಜವು ಒಂದುಗೂಡುತ್ತದೆ. ಎಲ್ಲರೂ ಜೊತೆಗೂಡಿ ಒಮ್ಮತದಿಂದ ದೇವರ ಕಾರ್ಯವನ್ನು ನೇರವೇರಿಸುವ ಎಂದರು. ನೂತನ ಸಮಿತಿಯ ಅಧ್ಯಕ್ಷರಾಗಿ ಉದ್ಯಮಿ ನಿತ್ಯಾನಂದ ಶೆಣೈ ಬದಿಯಡ್ಕ, ಕಾರ್ಯಾಧ್ಯಕ್ಷರಾಗಿ ಕುಂಬ್ಡಾಜೆ ಗ್ರಾಮಪಂಚಾಯಿತಿ ಉಪಾಧ್ಯಕ್ಷ ರವೀಂದ್ರ ರೈ ಗೋಸಾಡ, ಪ್ರಧಾನ ಕಾರ್ಯದರ್ಶಿಯಾಗಿ ಹರಿನಾರಾಯಣ ಶಿರಂತಡ್ಕ, ಕೋಶಾಧಿಕಾರಿಯಾಗಿ ಕೃಷ್ಣ ಮಣಿಯಾಣಿ ಅಗಲ್ಪಾಡಿ ಅವರನ್ನು ತೀರ್ಮಾನಿಸಲಾಯಿತು. ಊರಿನ ಗಣ್ಯರು, ಭಗವದ್ಭಕ್ತರು ಈ ಸಂದರ್ಭ ಪಾಲ್ಗೊಂಡಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು