ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಬಿಸಿಲಿನ ತಾಪ ಹೆಚ್ಚಳ ಸಾಧ್ಯತೆ


 

ತಿರುವನಂತಪುರಂ: ರಾಜ್ಯದಲ್ಲಿ ಶಾಖ (ಬಿಸಿಲು) ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಜಾಗರೂಕರಾಗಿರಬೇಕು ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಸೂಚಿಸಿದೆ. ಅಕ್ಟೋಬರ್ 28 ರಿಂದ ನವೆಂಬರ್ 1 ರವರೆಗೆ ಕೆಲವು ಪ್ರದೇಶಗಳಲ್ಲಿ ತಾಪಮಾನವು ಸಾಮಾನ್ಯಕ್ಕಿಂತ 3 ರಿಂದ 4 ಡಿಗ್ರಿ ಸೆಲ್ಸಿಯಸ್‌ವರೆಗೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಕೇಂದ್ರ ಹವಾಮಾನ ಇಲಾಖೆ ತಿಳಿಸಿದೆ. ಹೆಚ್ಚಿನ ಶಾಖವು ಸನ್‌ಸ್ಟ್ರೋಕ್ (ಬಿಸಿಲ ಬೇಗೆ), ಸನ್‌ಬರ್ನ್, ನಿರ್ಜಲೀಕರಣ (ದೇಹದಲ್ಲಿ ನೀರಿನಂಶ ಕಡಿಮೆಯಾಗುವುದು) ಸೇರಿದಂತೆ ಹಲವಾರು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ ಸಾರ್ವಜನಿಕರು ವಿಪತ್ತು ನಿರ್ವಹಣಾ ಪ್ರಾಧಿಕಾರದ ಸೂಚನೆಗಳನ್ನು ಪಾಲಿಸಬೇಕು.
ಬೆಳಿಗ್ಗೆ 11 ರಿಂದ ಸಂಜೆ 3 ರವರೆಗಿನ ಸಮಯದಲ್ಲಿ ನೇರವಾಗಿ ದೇಹಕ್ಕೆ ಹೆಚ್ಚು ಸಮಯ ಸತತವಾಗಿ ಸೂರ್ಯನ ಬೆಳಕು ತಗುಲುವುದನ್ನು ತಪ್ಪಿಸಬೇಕು. ಅಂಗನವಾಡಿ ಮಕ್ಕಳಿಗೆ ಬಿಸಿಲು ತಗದಂತೆ ಇರುವಂತಹ ವ್ಯವಸ್ಥೆಯನ್ನು ಜಾರಿಗೆ ತರಲು ಆಯಾ ಪಂಚಾಯತ್ ಅಧಿಕಾರಿಗಳು ಮತ್ತು ಅಂಗನವಾಡಿ ನೌಕರರು ವಿಶೇಷ ಗಮನ ಹರಿಸಬೇಕು.
ಮಕ್ಕಳಿಗೆ ಹೆಚ್ಚು ಬಿಸಿಲು ತಗಲುವ ಅಸೆಂಬ್ಲಿಗಳು (ಪ್ರಾರ್ಥನಾ ಸಭೆಗಳು) ಮತ್ತು ಇತರ ಕಾರ್ಯಕ್ರಮಗಳನ್ನು ತಪ್ಪಿಸಬೇಕು ಅಥವಾ ಸಮಯವನ್ನು ಮರುಹೊಂದಿಸಬೇಕು.
ಅಸ್ವಸ್ಥತೆ ಉಂಟಾದರೆ ತಕ್ಷಣ ವಿಶ್ರಾಂತಿ ಪಡೆಯಬೇಕು ಮತ್ತು ವೈದ್ಯಕೀಯ ಸಹಾಯವನ್ನು ಪಡೆದುಕೊಳ್ಳಬೇಕು. ಹವಾಮಾನ ಇಲಾಖೆ ಹಾಗೂ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕೃತ ಮುನ್ನೆಚ್ಚರಿಕೆಗಳನ್ನು ಗಮನಿಸಬೇಕು ಮತ್ತು ಪಾಲಿಸಬೇಕು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು