ಕಾಞಂಗಾಡು: ಕಣಜದ ಹುಳುವಿನ ದಾಳಿಯಿಂದಾಗಿ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಕೋಟಪ್ಪಾರ ನಿವಾಸಿ ಯುವಕ ಮೃತಪಟ್ಟಿದ್ದಾರೆ. ಪೆರೂರಿನ ಸಹದೇವನ್ (49) ಮೃತಪಟ್ಟವರು.
ಮೂತ್ರಪಿಂಡ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಎರಡು ದಿನಗಳ ಹಿಂದೆ ಕೆಲಸ ಮಾಡುತ್ತಿದ್ದ ವೇಳೆ ಕಣಜದ ಹುಳುಗಳು ದಾಳಿ ನಡೆಸಿ ಕಚ್ಚಿದ್ದವು. ಬಳಿಕ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಮುಂದುವರಿದಿದ್ದ ವೇಳೆ ನಿನ್ನೆ (ಮಂಗಳವಾರ) ಮಧ್ಯಾಹ್ನ ಅವರು ಮೃತಪಟ್ಟಿದ್ದಾರೆ.
ಮೃತರು ದಿವಂಗತ ಕಣ್ಣನ್ ಮತ್ತು ಮುತ್ತಾಣಿ ದಂಪತಿಯ ಪುತ್ರ. ಮೃತರು ಪತ್ನಿ: ಶೋಭಾ (ಸದ್ಗುರು ಶಾಲೆಯ ಉದ್ಯೋಗಿ). ಮಕ್ಕಳಾದ: ದೇವನಂದ್ ಮತ್ತು ದೇವದರ್ಶನ್.
ಎಂಬಿವರನ್ನು ಅಗಲಿದ್ದಾರೆ
Tags
ಕಾಞಂಗಾಡ್
