ಕುಂಬ್ಡಾಜೆ: ಪೊಡಿಪ್ಪಳ್ಳ ಶ್ರೀ ಚೀರುಂಬಾ ಭಗವತಿ ಕ್ಷೇತ್ರದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ಭರಣಿ ಮಹೋತ್ಸವದ ಯಶಸ್ವಿಗಾಗಿ ಮಹೋತ್ಸವ ಸಮಿತಿ ರಚನಾ ಸಭೆ ಡಿಸೆಂಬರ್ 6 ಆದಿತ್ಯವಾರದಂದು ಚೀರುಂಬಾ ಭಗವತಿ ಕ್ಷೇತ್ರ ಸಭಾ ಭವನದಲ್ಲಿ ಜರಗಲಿದೆ. ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯ ಬಿಡುಗಡೆ ಕಾರ್ಯಕ್ರಮ ತುಲಾ ಹತ್ತರಂದು ಕುಂಬ್ಡಾಜೆ ಭಂಡಾರ ಕ್ಷೇತ್ರದಲ್ಲಿ ಜರಗಿತು.
ಪೊಡಿಪ್ಪಳ್ಳ ಶ್ರೀ ಚೀರುಂಬಾ ಭಗವತಿ ಕ್ಷೇತ್ರದ ಅನುವಂಶಿಕ ಮೊಕ್ತೇಸರ ಶ್ರೀ ರಾಖಲ್ ಅಡ್ಯಂತಾಯ ಅವರು ಆಮಂತ್ರಣ ಪತ್ರಿಕೆಯನ್ನು ಹಿರಿಯ ಆಚಾರ ಸ್ಥಾನಿಕರಾದ ಅಂಬಾಡಿ ಕಾರ್ನವರ್ ಅವರಿಗೆ ಹಸ್ತಾಂತರಿಸುವ ಮೂಲಕ ಬಿಡುಗಡೆಗೊಳಿಸಿದರು.
ಕ್ಷೇತ್ರ ಭರಣ ಸಮಿತಿ ಅಧ್ಯಕ್ಷ ವಸಂತನ್ ಚೇಂಬೋಡು, ನವೀಕರಣ ಸಮಿತಿ ಅಧ್ಯಕ್ಷ ರಾಘವನ್ ಕನಕತ್ತೋಡಿ, ಇತರ ಪದಾಧಿಕಾರಿಗಳಾದ ಪ್ರಸಾದ್ ಕಡಂಬು, ಸದಾಶಿವ ಮೈಲು ತೊಟ್ಟಿ, ರತೀಶ್ ನೆಕ್ರಾಜೆ, ವಿಶ್ವನಾಥ ಬಳ್ಳಪದವು, ರವಿ ನವಶಕ್ತಿ, ಚಿರಿಯಂಡ ಬಡಕಾಜೆ, ಪುರುಷೋತ್ತಮ ಕೋಳಾರಿ, ರಾಜೇಶ್ ಪೊಡಿಪ್ಪಳ್ಳ, ಜನಾರ್ಧನ ಭಂಡಾರ ಮನೆ ಸಹಿತ ಭಾಗವಹಿಸಿದರು. ಪೊಡಿಪ್ಪಳ್ಳ ಶ್ರೀ ಚೀರುಂಬಾ ಭಗವತಿ ಕ್ಚೇತ್ರದ ಪುನರ್ ಪ್ರತಿಷ್ಠಾ ಮಹೋತ್ಸವ ಹಾಗೂ ಭರಣಿ ಮಹೋತ್ಸವ 2027 ಎಪ್ರಿಲ್ 25 ರಿಂದ ಮೇ.3 ರ ವರೆಗೆ ಜರಗಲಿರುವುದು
Tags
ಕುಂಬ್ಡಾಜೆ


