ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವ; ವಿದ್ಯಾರ್ಥಿಗಳ ಸ್ವಾಗತಕ್ಕೆ ತೆಂಗಿನ ಗರಿಯ ನಾಮಫಲಕ


ಬದಿಯಡ್ಕ: ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವದ ವೇದಿಕೆ ಸ್ಪರ್ಧೆಗಳು ನ.2,3,4ರಂದು ಜರಗಲಿವೆ. ಪ್ರಚಾರದ ಭಾಗವಾಗಿ ತೆಂಗಿನ ಗರಿಯ ನಾಮಫಲಕಗಳನ್ನು ಬದಿಯಡ್ಕ ಪೇಟೆಯಲ್ಲಿ ಸ್ಥಾಪಿಸಲಾಯಿತು. ಪ್ರಚಾರ ಸಮಿತಿ ಹಾಗೂ ಗ್ರೀನ್ ಪ್ರೋಟೋಕೋಲ್ ಸಮಿತಿ ನೇತೃತ್ವ ವಹಿಸಿದ್ದರು. ಶಾಲೆಯ ಪ್ರಾಂಶುಪಾಲ ಎಂ. ಶ್ರೀಕೃಷ್ಣ, ಶ್ಯಾಮಪ್ರಸಾದ್ ಮಾನ್ಯ, ಹಮೀದ್ ಕೆಡಂಜಿ, ಆನಂದ ಮೌವಾರ್, ಶಾಫಿ ಚೂರಿಪಳ್ಳಂ, ಅಪ್ಪುರಾಜ್ ಬದಿಯಡ್ಕ, ಲತೀಫ್ ಮಾರ್ಪನಡ್ಕ, ಚಂದ್ರನ್ ಪೊಯ್ಯಕಂಡ, ಉಣ್ಣಿಕೃಷ್ಣನ್ ಮಾಸ್ತರ್, ರಾಜೇಶ್ ಮಾಸ್ತರ್ ಅಗಲ್ಪಾಡಿ, ನಿರಂಜನ ರೈ ಪೆರಡಾಲ, ನಾರಾಯಣ ಮಾಸ್ತರ್ ಮುರಿಯಂಕೂಡ್ಲು, ನಟರಾಜ ಮಾಸ್ತರ್ ಪಟ್ಟಾಜೆ ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು